ಉಡುಪಿ:ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಉಡುಪಿ: ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ ಸರಳಾಯ, ವಿ ವಿಖ್ಯಾತ್ ಭಟ್ ಅವರ ಪೌರೋಹಿತ್ಯದಲ್ಲಿ ನವರಾತ್ರಿಿಯ ಪ್ರಥಮ ದಿನ ಸೋಮವಾರ ಕದಿರು ಕಟ್ಟುವಿಕೆಯಿಂದ ನವರಾತ್ರಿಿ ಮಹೋತ್ಸವಕ್ಕೆೆ ಚಾಲನೆ ನೀಡಲಾಯಿತು. ಪ್ರಾತಃಕಾಲ ಮಂಗಳವಾದ್ಯ ಸಹಿತ ಕದಿರನ್ನು ಬರಮಾಡಿಕೊಳ್ಳಲಾಯಿತು. ಪೂಜೆ ನೆರವೇರಿಸಿ ಸಾನ್ನಿಧ್ಯಕ್ಕೆೆ ಕದಿರು ಕಟ್ಟಲಾಯಿತು. ಅನಂತರ ಕ್ಷೇತ್ರದ ವತಿಯಿಂದ ಬಂದ ಭಕ್ತರಿಗೆ ಕದಿರನ್ನು ವಿತರಿಸಲಾಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ […]
ರಾಜ್ಯದಲ್ಲಿ ಸಿನಿಮಾಗಳಿಗೆ 200 ರೂ. ಏಕರೂಪ ದರ ನಿಗದಿ: ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಮಲ್ಟಿಪ್ಲೆಕ್ಸ್ ಸೇರಿದ ರಾಜ್ಯ ಎಲ್ಲಾ ಚಿತ್ರಮಂದಿರಗಳಲ್ಲಿ ತೆರಿಗೆ ಹೊರತುಪಡಿಸಿ ಎಲ್ಲಾ ಭಾಷೆಯ ಸಿನಿಮಾಗಳಿಗೆ 200 ರೂಪಾಯಿಯ ಏಕರೂಪದ ದರದ ಟಿಕೆಟ್ ನಿಗದಿಪಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಮಂಗಳವಾರ (ಸೆ.23) ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಕಂಬೈನ್ಸ್, ಮಲ್ಟಿಪ್ಲೆಕ್ಸ್ ಅಸೋಷಿಯೇಷನ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸದರಿ ವಿಚಾರಣೆ ನಡೆಸಿರುವ ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ.ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು 2014 […]
ಠಾಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ದೂರು ಸ್ವೀಕರಿಸದೇ ಇರಲು ಸಾಧ್ಯವಿಲ್ಲ: ಹೈ ಕೋರ್ಟ್

ಬೆಂಗಳೂರು: ‘ನಾಪತ್ತೆ ಪ್ರಕರಣಗಳಲ್ಲಿ ನಾಪತ್ತೆಯಾದವರ ಬಗ್ಗೆ ದೂರು ಸ್ವೀಕರಿಸುವಾಗ ಪೊಲೀಸರು; ‘ಸಂಬಂಧಿಸಿದ ಪ್ರದೇಶ ನಮ್ಮ ಠಾಣೆ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ನಿರಾಕರಣೆ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ‘ನನ್ನ ಪುತ್ರಿ 2023ರಲ್ಲಿ ನಾಪತ್ತೆಯಾಗಿದ್ದಾಳೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿ ಹುಬ್ಬಳಿಯ ರಾಮಕೃಷ್ಣ ಭಟ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ (ಧಾರವಾಡ), ಇಂತಹ ದೂರುಗಳು ಬಂದಾಗ ಪೊಲೀಸರು ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ […]
ನವರಾತ್ರಿಯ ಪ್ರಯುಕ್ತ ಸೆ.22 ರಿಂದ ಜ.15 ರವರೆಗೆ “ಉಡುಪಿ ಬಲ್ಲಾಳ್ ಮೊಬೈಲ್ಸ್” ನಲ್ಲಿ ‘ದಿ ಗ್ರೇಟ್ ಫೆಸ್ಟಿವಲ್ ಸೇಲ್’

ಉಡುಪಿ: ನಗರದ ಪ್ರಸಿದ್ಧ ಬಳ್ಳಾಲ್ ಮೊಬೈಲ್ಸ್‌ನಲ್ಲಿ ಈ ನವರಾತ್ರಿಗೆ ಗ್ರಾಹಕರಿಗೆ ವಿಶೇಷ ಕೊಡುಗೆ ” ದಿ ಗ್ರೇಟ್ ಫೆಸ್ಟಿವಲ್ ಸೇಲ್” ನಡೆಯುತ್ತಿದೆ.ಈ ವಿಶೇಷ ಕೊಡುಗೆಯು ಸೆ.22 ರಿಂದ ಜ.17 ರ ವರೆಗೆ ಇರಲಿದ್ದು, ಈ ಕೊಡುಗೆಯಲ್ಲಿ ಮೊಬೈಲ್ ಖರೀದಿಯ ಮೇಲೆ ಬಂಪರ್ ಪ್ರೈಸ್‌ನಲ್ಲಿ ಹೀರೋ ಬೈಕ್ ಪಡೆಯುವ ಸುವರ್ಣಾವಕಾಶವನ್ನು ಗ್ರಾಹಕರು ಪಡೆಯಬಹುದಾಗಿದೆ. ಇದರೊಂದಿಗೆ ಸ್ಕ್ರ್ಯಾಚ್ ಆಂಡ್ ವಿನ್ ಆಫರ್‌ನಲ್ಲಿ ಪ್ರಥಮ ಬಹುಮಾನವಾಗಿ ಪ್ರಿಡ್ಜ್, ದ್ವಿತೀಯ ಬಹುಮಾನವಾಗಿ ವಾಶಿಂಗ್ ಮೆಶಿನ್, ತೃತೀಯ ಬಹುಮಾನ ಲ್ಯಾಪ್‌ಟಾಪ್, 4ನೇ ಬಹುಮಾನ ಸ್ಮಾರ್ಟ್ […]
ಉಡುಪಿ:ಸೆ.26 ರಂದು ಉದ್ಯೋಗ ಮೇಳ

ಉಡುಪಿ: ನಗರದ ಪೂರ್ಣಪ್ರಜ್ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಕ್ಯಾಂಪಸ್‌ನಲ್ಲಿ ಸೆ.26ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪೂರ್ಣ ಉದ್ಯೋಗ ಮೇಳ 2025 – ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳವು ಸಂಸ್ಥೆಯ ಎಂಬಿಎ, ಎಂಸಿಎ, ಎಂ.ಕಾಂ ಸ್ಟ್ರೀಮ್‌ಗಳ ಹೊಸ ಪದವೀಧರರಿಗೆ ಮುಕ್ತವಾಗಿದೆ, ಅವರು ಉತ್ತಮ ಉದ್ಯೋಗಾವ ಕಾಶಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಪೂರ್ಣ ಉದ್ಯೋಗ ಮೇಳವನ್ನು ಆಭರಣ ಮೋಟಾರ್ಸ್ ಉಡುಪಿ ಇವರು ಪ್ರಾಯೋಜಿಸಲಿದ್ದಾರೆ. 30ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳು […]