ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ರೇಂಜರ್ಸ್- ರೋವರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ಘಟಕದ 2021-22 ಸಾಲಿನ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಉಡುಪಿಯ ಯುವ ರೋವರ್ ಸ್ಕೌಟ್ ಲೀಡರ್ ವಿತೇಶ್ ಕಾಂಚನ್ ಮಾತನಾಡಿ, ವಿದ್ಯಾರ್ಥಿಗಳು ಸ್ಕೌಟ್ಸ್ ಮೂಲ ಧ್ಯೇಯವನ್ನು ಅರಿತುಕೊಳ್ಳುವುದರ ಜತೆಗೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ದೇಶದ ಏಳಿಗೆಗಾಗಿ ಕರ್ತವ್ಯ ಮಾಡಬೇಕು ಎಂದು ಹೇಳಿದರು. ಕಾಲೇಜಿನ ಉಪಪ್ರಾಮ್ಶುಪಾಲ ಡಾ. ಪ್ರಕಾಶ್ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಕಾತರಿ ಘಟಕದ ಸಂಯೋಜಕರಾದ ಡಾ. […]
ಕಾರ್ಕಳ: ಬಜಗೋಳಿಯ ನಿವಾಸಿ ನಾಪತ್ತೆ
ಕಾರ್ಕಳ: ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಎಂಬಲ್ಲಿ ನಡೆದಿದೆ. ಬಜಗೋಳಿ ನಿವಾಸಿ ಶೇಖರ (40) ನಾಪತ್ತೆಯಾದ ವ್ಯಕ್ತಿ. ಇವರು ನವೆಂಬರ್ 24ರಂದು ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಚಹರೆ: 5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಛೇರಿ ದೂರವಾಣಿ ಸಂಖ್ಯೆ: […]
ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ಕೇರಳ ಸರಕಾರ ವಿಫಲ: ಯಶ್ ಪಾಲ್ ಸುವರ್ಣ ಆಕ್ರೋಶ
ಉಡುಪಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಕೇರಳ ರಾಜ್ಯ ಸರಕಾರ ರಾಷ್ಟ್ರೀಯವಾದಿ ಚಿಂತನೆಯ ಬಿಜೆಪಿ ಕಾರ್ಯಕರ್ತರ ರಕ್ಷಣೆಯಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 19 ರಂದು ಮುಂಜಾನೆ ಪಿಎಫ್ಐ ಉಗ್ರರಿಂದ ಬರ್ಬರವಾಗಿ ಹತ್ಯೆಗೀಡಾದ ಕೇರಳ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಶ್ರೀ ರಂಜಿತ್ ಶ್ರೀನಿವಾಸನ್ ರವರ ಮನೆಗೆ […]
ಉದ್ಯಾವರ: ಸರ್ವಧರ್ಮೀಯರ ಸಹಕಾರದೊಂದಿಗೆ ಸೌಹಾರ್ದ ಕ್ರಿಸ್ ಮಸ್ ಆಚರಣೆ
ಉದ್ಯಾವರ: ಧ್ವನಿ ಇದ್ದವರು ಮತ್ತು ಶಕ್ತಿ ಉಳ್ಳವರು ಮಾತ್ರ ಸಮಾಜದಲ್ಲಿ ಬೆಳೆಯುವಂತಾಗಿದೆ. ದೀನ ದಲಿತರು, ಬಡವರು, ನಿರ್ಗತಿಕರು ಮತ್ತು ಇತರರೆಲ್ಲರೂ ಬದಿಗೆ ಸರಿಯಲ್ಪಡುತ್ತಿದ್ದಾರೆ. ಈ ಪ್ರಪಂಚ ನಮ್ಮದು. ನಿಮ್ಮದಲ್ಲ. ನಾನೇ ಶ್ರೇಷ್ಠ, ನೀನು ಕನಿಷ್ಠ. ನಾನು ಶ್ರೀಮಂತ, ನೀನು ಬಡವ. ಇದೆಲ್ಲ ನನ್ನದು. ನಿನಗಿಲ್ಲ ಇದರಲ್ಲಿ ಪಾಲು. ಇಂತಹ ವ್ಯವಸ್ಥೆ ವಿಶ್ವದಲ್ಲಿ ಮಾತ್ರವಲ್ಲದೆ ನಮ್ಮ ರಾಷ್ಟ್ರದಲ್ಲೂ ಕಾಣ ಸಿಗುತ್ತಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಚೇತನ್ ಲೋಬೊ ತಿಳಿಸಿದರು. ಉದ್ಯಾವರ ಸೌಹಾರ್ದ ಸಮಿತಿ ನೇತೃತ್ವದಲ್ಲಿ […]
ತ್ರಿಶಾ ವಿದ್ಯಾ ಕಾಲೇಜು: ಪುಸ್ತಕ ಮನೆ ಉದ್ಘಾಟನೆ
ಉಡುಪಿ: ಆಚರಣೆಗಳಿಗೆ ಉದ್ದೇಶವನ್ನಿಟ್ಟುಕೊಂಡಾಗ ಮಾತ್ರ ಸಾರ್ಥಕ್ಯ ಭಾವ ಮೂಡುತ್ತದೆ. ಪ್ರಸ್ತುತ ಸಮಾಜವನ್ನು ಬದಲಿಸಲು ಓದಿನಿಂದ ಮಾತ್ರ ಸಾಧ್ಯ. ಪುಸ್ತಕ ನಮ್ಮ ದಾರಿಯನ್ನು ನಿರ್ಧರಿಸುತ್ತದೆ. ಓದುವ ಹವ್ಯಾಸ ಹೆಚ್ಚಾದಷ್ಟು ದೇಶ ಭದ್ರವಾಗಿರುತ್ತದೆ ಎಂದು ಸುಧಾ ಆಡುಕಳ ಹೇಳಿದರು. ತ್ರಿಶಾ ಕಾಲೇಜಿನ ಪುಸ್ತಕಮನೆ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮೊಬೈಲಿಂದ ಪುಸ್ತಕದ ಕಡೆಗೆ ಹೆಚ್ಚು ಆತ್ಮೀಯರನ್ನಾಗಿ ಮಾಡಿದಷ್ಟು ಅವರ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕದ […]