ಮಾಜಿ ಶಾಸಕ ಉರಿಮಜಲು ಕೆ.ರಾಮ್ ಭಟ್ ನಿಧನ; ಪೇಜಾವರ ಶ್ರೀ ಸಹಿತ ಗಣ್ಯರಿಂದ ಸಂತಾಪ

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಉರಿಮಜಲು ಕೆ.ರಾಮ್ ಭಟ್ (92) ಅವರು ಸೋಮವಾರ ನಿಧನರಾದರು. ವಿಧಿ ವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ, ಇಂದು ಕೊಂಬೆಟ್ಟಿನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ರಾಮ್ ಭಟ್, ಜನಸಂಘದ ನಾಯಕರಾಗಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಪುತ್ತೂರು ಪುರಸಭೆಯ ಅಧ್ಯಕ್ಷ, ಕ್ಯಾಂಪ್ಕೋ ಅಧ್ಯಕ್ಷರಾಗಿದ್ದರು. 1978 ಮತ್ತು 1983 ರಲ್ಲಿ ಪುತ್ತೂರು […]

ಮಣಿಪಾಲ: ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ

ಮಣಿಪಾಲ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ 80 ಬಡಗುಬೆಟ್ಟು ಗ್ರಾಮದ ನೇತಾಜಿ ನಗರದಲ್ಲಿ ಇಂದು ನಡೆದಿದೆ. ನೇತಾಜಿ ನಗರದ ನಿವಾಸಿ ಜಯಲಕ್ಷ್ಮೀ (35) ನೇಣಿಗೆ ಶರಣಾದ ಮಹಿಳೆ. ಈಕೆ ಎರಡು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ಈ ಹಿಂದೆ ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ನೆರೆ ಮನೆಯವರ ಸಹಾಯದಿಂದ ಬದುಕುಳಿದಿದ್ದಳು. ಇಂದು ಆಕೆಯ ವಿಧಿ ಕೈಕೊಟ್ಟಿತ್ತು. ಮನೆಯ ಹಾಲ್ ನಲ್ಲಿ ನೇಣಿಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡಿದ್ದಾಳೆ. […]

ಹೊಕ್ಕಾಡಿಗೋಳಿ “ವೀರ – ವಿಕ್ರಮ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾಂಶ ಪ್ರಕಟ

ಬೆಳ್ತಂಗಡಿ: ಹೊಕ್ಕಾಡಿಗೋಳಿ “ವೀರ – ವಿಕ್ರಮ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾoಶ ಕೂಟದಲ್ಲಿ 173 ಜತೆ ಕೋಣಗಳು ಭಾಗವಹಿಸಿದ್ದು, ಕನೆಹಲಗೆ: 2 ಜೊತೆ, ಅಡ್ಡಹಲಗೆ: 7 ಜೊತೆ, ಹಗ್ಗ ಹಿರಿಯ: 14 ಜೊತೆ, ನೇಗಿಲು ಹಿರಿಯ: 29 ಜೊತೆ, ಹಗ್ಗ ಕಿರಿಯ: 29 ಜೊತೆ, ನೇಗಿಲು ಕಿರಿಯ: 92 ಜೊತೆ ಒಟ್ಟು ಕೋಣಗಳ ಸಂಖ್ಯೆ: 173 ಜೊತೆ ಕೋಣಗಳು ಭಾಗವಹಿಸಿದ್ದವು. •••••••••••••••••••••••••••••••••••••••••••••• ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ […]

ಉಡುಪಿ: ಕಾರು ಅಪಘಾತ; ಇಬ್ಬರ ಸಾವಿಗೆ ಕಾರಣನಾದ ಚಾಲಕನಿಗೆ ಜೈಲು ಶಿಕ್ಷೆ

ಉಡುಪಿ: ಆರು ವರ್ಷಗಳ‌ ಹಿಂದೆ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 2015 ಜುಲೈ 19ರಂದು ಬೆಳಿಗ್ಗೆ 10 ಗಂಟೆಗೆ ಹಿರಿಯಡ್ಕದ ಪ್ರಥಮ ದರ್ಜೆ ಕಾಲೇಜ್ ಗೇಟ್ ಬಳಿ ಯೋಹಾನ್ ಎಂಬಾತನು ತನ್ನ ಕಾರನ್ನು ಪೆರ್ಡೂರು ಕಡೆಯಿಂದ ಹಿರಿಯಡ್ಕ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸರಸ್ವತಿ ಹಾಗೂ […]

ಕಾರ್ಕಳ: ಖ್ಯಾತ ಜ್ಯೋತಿಷಿ ರಾಜಗೋಪಾಲ ಭಟ್ ಇನ್ನಿಲ್ಲ

ಕಾರ್ಕಳ: ಖ್ಯಾತ ಜ್ಯೋತಿಷಿ ರಾಜಗೋಪಾಲ ಭಟ್ ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಕಾರ್ಕಳದ ಪುಟ್ಟಗ್ರಾಮ ಬಜಗೋಳಿಯಲ್ಲಿ ಯಾರೊಬ್ಬರಿಂದಲೂ ದೇಣಿಗೆ ಪಡೆಯದೇ ಸ್ವಯಂ ತನ್ನ ತಪಸ್ಸು ಮತ್ತು ಮುತುವರ್ಜಿಯಿಂದಲೇ ಚಂಡೀಹವನ ,ದಶ – ಶತ- ಸಹಸ್ರ – ಅಯುತ ಚಂಡಿಕಾಯಾಗ , ಮಹಾಮೃತ್ಯುಂಜಯ ಯಾಗವೇ ಮೊದಲಾಗಿ ಬೃಹತ್ ಯಾಗಗಳನ್ನು ಲೋಕದೊಳಿತಿಗಾಗಿ ಸಂಕಲ್ಪಿಸಿ ಯಶಸ್ವೊಯಾಗಿ ಸಾಕಾರಗೊಳಿಸಿ ನಿಜಾರ್ಥದಲ್ಲಿ ಪುರದ ಹಿತ ಬಯಸಿದ (ಪುರೋಹಿತ ) ಈ ಗ್ರಾಮವನ್ನು ಯಾಗಭೂಮಿಯಾಗಿಸಿದ್ದ ಮಹಾಬ್ ಜ್ಯೋತಿಷಿ. ನಿಸ್ಪೃಹ ದೇವೀ ಆರಾಧಕರಾಗಿದ್ದ ಭಟ್ಟರು ದೇವಿಯ […]