ಜಿಯೊ: ಕರೆ, ಡೇಟಾ ಶುಲ್ಕ ಹೆಚ್ಚಳ: ಡಿಸೆಂಬರ್‌ 1ರಿಂದ ಹೊಸ ದರ ಜಾರಿ

ಬೆಂಗಳೂರು: ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಬಳಿಕ ಇದೀಗ ಜಿಯೊ ಕಂಪ‍ನಿ ತನ್ನ ಪ್ರಿಪೇಯ್ಡ್‌ ಸೇವೆಗಳ ಮೇಲಿನ ಶುಲ್ಕವನ್ನು ಶೇ 21ರವರೆಗೆ ಹೆಚ್ಚಿಸುವ ನಿರ್ಧಾರವನ್ನು ಘೋಷಿಸಿದೆ. ಡಿಸೆಂಬರ್‌ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿವೆ ಎಂದು ತಿಳಿಸಿದೆ. ಜಿಯೊಫೋನ್‌ ಯೋಜನೆ, ಅನಿಯಮಿತ ಯೋಜನೆ ಮತ್ತು ಡೇಟಾ ಆ್ಯಡ್‌ಆನ್‌ ಮೇಲಿನ ಶುಲ್ಕಗಳನ್ನು ಶೇ 19.6 ರಿಂದ ಶೇ 21.3ರವರೆಗೂ ಏರಿಕೆ ಮಾಡಲಾಗಿದೆ. ಪ್ರಿಪೇಯ್ಡ್ ದರ                     […]

ಸದ್ಯಕ್ಕೆ ಶಾಲೆ ಬಂದ್ ಮಾಡಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ತುಮಕೂರು: ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳನ್ನು ಬಂದ್ ಮಾಡುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 48 ಸಾವಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿದ್ದು, ಯಾವ ಶಾಲೆಯಲ್ಲೂ ಮಕ್ಕಳಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿರುವಂತೆ ಆರೋಗ್ಯವನ್ನೂ ಗಮನಿಸಲಾಗುತ್ತಿದೆ. ಹೀಗಾಗಿ ಸದ್ಯಕ್ಕೆ ಶಾಲೆಗಳನ್ನು ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪೋಷಕರು ಆತಂಕ ಪಡುವ ಅಗತ್ಯವಿಲ್ಲ: ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಪೋಷಕರು ಗಾಬರಿ, ಆತಂಕಪಡುವ […]

ಶರಾವತಿ ನದಿಯಲ್ಲಿ ತೆಪ್ಪೋತ್ಸವ; ಪೇಜಾವರ ಶ್ರೀಗಳಿಗೆ ಅದ್ದೂರಿ ಸ್ವಾಗತ

ಉಡುಪಿ: ಹೊನ್ನಾವರಕ್ಕೆ ಭೇಟಿ ನೀಡಿದ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅಲ್ಲಿನ ಭಕ್ತರು ಮತ್ತು ನಾಗರಿಕರು ಅದ್ದೂರಿಯಾಗಿ ಸ್ವಾಗತಿಸಿ ಗುರುಪೂಜೆ ನಡೆಸಿದರು. ಶ್ರೀಗಳನ್ನು ಬಿಕಾಸಿ ತಾರಿಬಾಗಿಲಿನಿಂದ ಬರಮಾಡಿಕೊಂಡು ಕೊಂಬು ಕಹಳೆ ವಾದ್ಯ ಚಂಡೆ ಮೊದಲಾದವುಗಳಿಂದ ಕೂಡಿದ ವೈಭವದ ಮೆರವಣಿಗೆಯಲ್ಲಿ ಶರಾವತಿ ನದಿ ತೀರಕ್ಕೆ ಬಂದು ಅಲ್ಲಿ ಶ್ರೀಗಳಿಂದ ಗಂಗಾಪೂಜೆ ನೆರವೇರಿಸಲಾಯಿತು. ಬಳಿಕ ಸಾಲಂಕೃತ ತೆಪ್ಪದಲ್ಲಿ ಪೇಜಾವರ ಮಠದ ಪಟ್ಟದ ಶ್ರೀ ರಾಮ ವಿಠಲ ದೇವರನ್ನು ಮತ್ತು ಶ್ರೀಗಳನ್ನು ಕುಳ್ಳಿರಿಸಿ ಶರಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಿತು. […]

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ವದಂತಿ ಹಬ್ಬಿಸಿದರೆ ಕಠಿಣ ಕ್ರಮ: ಸಚಿವ ಡಾ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ಪ್ರಸ್ತಾಪ ಇಲ್ಲ. ವದಂತಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ಓಮಿಕ್ರಾನ್ ಆತಂಕದ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವುದಕ್ಕೆ ಇನ್ನೂ ಒಂದು ವಾರ ಬೇಕಾಗುತ್ತದೆ. ಡಿಸೆಂಬರ್ 1 ರಂದು ನಮಗೆ ವರದಿ ಬರುತ್ತದೆ. ಈಗಾಗಲೇ 12 ದೇಶಗಳಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಅಂತರಾಷ್ಟ್ರೀಯ ವಿಮಾನಗಳ ಮೂಲಕ ರಾಜ್ಯಕ್ಕೆ ಪ್ರಯಾಣಿಕರು ಬರುತ್ತಿದ್ದಾರೆ. […]

ಸಹಕಾರ ಭಾರತಿ ಕುಂದಾಪುರ ತಾಲೂಕು ಅಭ್ಯಾಸ ವರ್ಗ

ಕುಂದಾಪುರ: ಕುಂದಾಪುರ ಸಹಕಾರ ಭಾರತಿ ತಾಲೂಕು ಅಭ್ಯಾಸ ವರ್ಗ ಸಿದ್ದಾಪುರ ರೋಟರಿ ಭವನದಲ್ಲಿ ನಡೆಯಿತು. ಅಭ್ಯಾಸ ವರ್ಗವನ್ನು ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ ಕಡ್ತಲ ಉದ್ಘಾಟಿಸಿದರು‌. ಬಳಿಕ ಮಾತನಾಡಿ, ಸಹಕಾರ ಭಾರತಿಯೂ ಸಹಕಾರಿ ಕ್ಷೇತ್ರದ ಮೇಲು ಸ್ಥರದ ಸಂಘಟನೆ ಮತ್ತು ದೇಶದ ಏಕೈಕ ಸರಕಾರೇತರ ಸಂಘಟನೆಯಾಗಿದೆ. ಸಹಕಾರ ಭಾರತಿ ಅಭ್ಯಾಸ ವರ್ಗ ದ ಮೂಲಕ ಸಮಾನ ಮನಸ್ಕ ಸಹಕಾರಿ ಗಳನ್ನು ಸಂಘಟನೆ ಯಾಗಿ ಒಗ್ಗೂಡಿಸಿ ಸಹಕಾರಿ ಕ್ಷೇತ್ರ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ […]