ನ್ಯೂ ಉಡುಪಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಶುಭಾರಂಭ
ಉಡುಪಿ: ಕಲ್ಯಾಣಪುರ ಸಂತೆಕಟ್ಟೆಯ ಜಿಎಸ್‌ಜೆ ಗ್ಯಾಲಕ್ಸಿ ಕಾಂಪ್ಲೆಕ್ಸ್ ನಲ್ಲಿ ನ್ಯೂ ಉಡುಪಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸೋಮವಾರ ಶುಭಾರಂಭಗೊಂಡಿತು. ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ ಎಸ್.ಕೆ ಅವರು, ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅನುಭವವುಳ್ಳ ತಂಡವನ್ನು ಹೊಂದಿದ್ದು, ಕಾನೂನಾತ್ಮಕ ವಿಚಾರಗಳಲ್ಲಿಯೂ ಈ ತಂಡ ಉತ್ತಮವಾಗಿದೆ. ಈ ಸೊಸೈಟಿ ಎತ್ತರಕ್ಕೆ ಬೆಳೆದು ಹಲವಾರು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, […]
ಉಡುಪಿ: ಗೀತಾಂಜಲಿ ಸುವರ್ಣ ಸಾರಥ್ಯದಲ್ಲಿ ಬಡಅಂಗವಿಕಲ ಮಹಿಳೆಗೆ ಮನೆ ನಿರ್ಮಾಣ
ಉಡುಪಿ: ಮಾಜಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಆದಿಉಡುಪಿ ಮೂಡುಬೆಟ್ಟುವಿನ ಕಂಬಳಕಟ್ಟೆ ಎಂಬಲ್ಲಿನ ಬಡ ಅಂಗವಿಕಲ ಮಹಿಳೆ ಉಷಾ ಪೂಜಾರಿ ಅವರಿಗೆ ನೂತನ ಮನೆ ನಿರ್ಮಿಸಿಕೊಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಉಷಾ ಅವರ ಮನೆ ಸಂಪೂರ್ಣ ಶಿಥಿಲಗೊಂಡು ಬಿದ್ದು ಹೋಗಿತ್ತು. ಅವರ ಮಗ ಕೂಡ ಬುದ್ಧಿಮಾಂದ್ಯನಾಗಿದ್ದು, ಇದ್ದ ಮನೆಯನ್ನು ಕಳೆದುಕೊಂಡು ಅಸಹಾಯಕರಾಗಿದ್ದರು. ಈ ವಿಚಾರವನ್ನು ಮಾಜಿ ನಗರಸಭಾ ಸದಸ್ಯ ಸುರೇಶ್ ಶೆಟ್ಟಿ ಅವರು ಗೀತಾಂಜಲಿ ಸುವರ್ಣ ಅವರ ಗಮನಕ್ಕೆ ತಂದಿದ್ದು, ಅದರಂತೆ ಅವರ […]
ಉಡುಪಿ ನಿತ್ಯಾನಂದ ಮಂದಿರ-ಮಠ; ನ.24ರಂದು 60ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿನ ಶ್ರೀಜಗದ್ಗುರು ನಿತ್ಯಾನಂದ ಸ್ವಾಮೀಜಿ ಮಂದಿರ- ಮಠದಲ್ಲಿ 60ನೇ ವಾರ್ಷಿಕೋತ್ಸವ ಮತ್ತು ಭಜನಾ ಕಾರ್ಯಕ್ರಮವು ನ.24ರ ಬುಧವಾರದಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಊರ ಪರವೂರ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಬಾಲಭೋಜನ, ಅನ್ನಸಂತರ್ಪಣೆ, ಸಂಜೆ 4-30 ಕ್ಕೆ ಮಂದಿರದ ಆವರಣದಲ್ಲಿ ಪಲ್ಲಕಿ ಉತ್ಸವ, ರಾತ್ರಿ 8 ಗಂಟೆಗೆ ಮಹಾಪೂಜೆ ಜರುಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಎರ್ಮಾಳ್ ಶಶಿಧರ್ ಕೆ. ಶೆಟ್ಟಿ ಪ್ರಕಟಣೆಯಲ್ಲಿ […]
ಟಿವಿ ವರದಿಗಾರನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿಯ ಬಂಧನ
ಮಂಗಳೂರು: ಟಿವಿ ವರದಿಗಾರನ ಮೇಲೆ ವಕೀಲನೋರ್ವ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಖಾಸಗಿ ಟಿವಿ ವರದಿಗಾರ ಸುಖ್‌ಪಾಲ್ ಪೊಳಲಿ ಅವರ ಮೇಲೆ ಹಲ್ಲೆ ನಡೆದಿದ್ದು, ಅವರ ತಲೆಗೆ ತೀವ್ರ ತರದ ಗಾಯವಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದ ಆರೋಪಿಯನ್ನು ವಕೀಲ ಯದುನಂದನ್ ಎಂದು ಗುರುತಿಸಲಾಗಿದೆ. ವೈಯಕ್ತಿಕ ವಿಚಾರದ ದ್ವೇಷದಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಆರೋಪಿ ನಿನ್ನೆ ಸಂಜೆ ರಾಡ್‌ನಿಂದ ಸುಖ್‌ಪಾಲ್ ಮೇಲೆ ಹಲ್ಲೆ ನಡೆಸಿದ್ದನು ಎಂದು ತಿಳಿದುಬಂದಿದೆ. […]
ಮಣಿಪಾಲ: ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ನಾಲ್ವರ ತಂಡದಿಂದ ಮಾರಣಾಂತಿಕ ಹಲ್ಲೆ
ಮಣಿಪಾಲ: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ನಾಲ್ವರ ತಂಡವೊಂದು ತಡೆದುನಿಲ್ಲಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಮಣಿಪಾಲ 80 ಬಡಗಬೆಟ್ಟು ಗ್ರಾಮದ ನೇತಾಜಿನಗರ ಎಂಬಲ್ಲಿ ನಡೆದಿದೆ. 80 ಬಡಗಬೆಟ್ಟು ಗ್ರಾಮದ ನೇತಾಜಿ 1ನೇ ಕ್ರಾಸ್ ನಿವಾಸಿ ರಾಮ ಎಂಬವರು ಹಲ್ಲೆಗೆ ಒಳಾಗದ ವ್ಯಕ್ತಿ. ಇವರು ನ.21ರಂದು ಬೆಳಿಗ್ಗೆ ನೇತಾಜಿ ನಗರ 4ನೇ ಕ್ರಾಸ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳಾದ ಗಣೇಶ, ರಾಕೇಶ, ರಾಜೇಂದ್ರ ಮತ್ತು ಮಣಿ ಎಂಬವರು ತಡೆದು ನಿಲ್ಲಿಸಿದ್ದಾರೆ. ಬಳಿಕ […]