‘ಸನ್ ರೈಸ್ ಓವರ್ ಅಯೋಧ್ಯಾ’ ಪುಸ್ತಕ ನಿಷೇಧಿಸುವಂತೆ ಉಡುಪಿ ರಾಮ್ ಸೇನಾ ಆಗ್ರಹ
ಉಡುಪಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬರೆದಿರುವ “ಸನ್ ರೈಸ್ ಓವರ್ ಅಯೋಧ್ಯಾ” ಎಂಬ ಹಿಂದೂ ವಿರೋಧಿ ಪುಸ್ತಕವನ್ನು ಬಿಡುಗಡೆಗೊಳಿಸಲು ಅವಕಾಶ ನೀಡಬಾರದು. ಅದಕ್ಕೆ ನಿಷೇಧ ಹೇರಬೇಕೆಂದು ಜಯರಾಮ್ ಅಂಬೇಕಲ್ಲು ನೇತೃತ್ವದ ರಾಮ್ ಸೇನಾ ಉಡುಪಿ ಜಿಲ್ಲಾ ಘಟಕದಿಂದ ಕೇಂದ್ರ ಗ್ರಹ ಸಚಿವರಿಗೆ ಉಡುಪಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಇಂದು ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಜಯರಾಮ್ ಅಂಬೇಕಲ್ಲು, ಮುಖಂಡರಾದ ಶರತ್ ಮಣಿಪಾಲ, ಸುದರ್ಶನ್ ಕಪ್ಪೆಟ್ಟು, ಸಂದೀಪ್ ಮೂಡುಬೆಳ್ಳೆ, ಗಗನ್ ಪೂಜಾರಿ, ರಾಕೇಶ್ ನಿಟ್ಟೂರು, ಹರೀಶ್ ಪೂಜಾರಿ, ನಿತಿನ್, […]
ಕಾರ್ಕಳ: ಸಿಡಿಲು ಬಡಿದು ವ್ಯಕ್ತಿ ಮೃತ್ಯು
ಕಾರ್ಕಳ: ಮನೆಗೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ನೀರೆ ಎಂಬಲ್ಲಿ ಇಂದು ಸಂಜೆ 4 ಗಂಟೆಗೆ ನಡೆದಿದೆ. ಮೃತರನ್ನು ನೀರೆ ರಾಜೀವನಗರದ ನಿವಾಸಿ ವಾದಿರಾಜ ಆಚಾರ್ಯ(60) ಎಂದು ಗುರುತಿಸಲಾಗಿದೆ. ಇಂದು ಸಂಜೆ ವಾದಿರಾಜ ಅವರ ಮನೆಗೆ ಸಿಡಿಲು ಬಡಿದಿದ್ದು, ಮನೆಯೊಳಗಿದ್ದ ವಾದಿರಾಜ ಆಚಾರ್ಯ ಅವರು ಸಿಡಿಲಿನ ಹೊಡೆತಕ್ಕೆ ನೆಲದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಬೈಲೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. […]
ನ.19ಕ್ಕೆ ಉಡುಪಿಯಲ್ಲಿ ಜನಸ್ವರಾಜ್ ಸಮಾವೇಶ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಮತದಾರರಾಗಿ ಮತ ಚಲಾಯಿಸಲಿರುವ ವಿಧಾನ ಪರಿಷತ್ ಚುನಾವಣೆಯು ಡಿ.10ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನ.19 ಶುಕ್ರವಾರ ಬೆಳಿಗ್ಗೆ ಗಂಟೆ 11ಕ್ಕೆ “ಜನಸ್ವರಾಜ್ ಸಮಾವೇಶ”ವು ಉಡುಪಿ ಪುರಭವನದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಅವರು ಇಂದು ಹೋಟೆಲ್ ಕಿದಿಯೂರ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಯೋಜನೆಯಂತೆ […]
ಬೆಳ್ತಂಗಡಿ: ವಿಶೇಷ ಪ್ರಭೇದಕ್ಕೆ ಸೇರಿದ ಕಪ್ಪೆಯೊಂದು ಪತ್ತೆ..!!
ಬೆಳ್ತಂಗಡಿ: ವಿಶೇಷ ಪ್ರಭೇದದ ಕಪ್ಪೆಯೊಂದು ಬೆಳ್ತಂಗಡಿ ಗೇರುಕಟ್ಟೆ ಸಮೀಪದ ಮನೆಯ ತೋಟವೊಂದರಲ್ಲಿ ಸೋಮವಾರ ಪತ್ತೆಯಾಗಿದೆ. ಈ ಕಪ್ಪೆಯು ಮಲಬಾರ್ ಪ್ರಾಗ್ (malabar gliding frog) ಎಂಬ ಪ್ರಭೇದಕ್ಕೆ ಸೇರಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಬಲು ಅಪರೂಪಕ್ಕೆ ಕಾಣಸಿಗುವ ಪ್ರಭೇದವಾಗಿದೆ. ಭಾರತದ ಪಶ್ಚಿಮಘಟ್ಟ ಕೆಲವೊಂದು ಭಾಗಗಳಲ್ಲಿ ಅಪರೂಪ ಎಂಬಂತೆ ಕಾಣಸಿಗುತ್ತವೆ. ಪಾಚಿ ಹಿಡಿಯುವ ಮರ, ಹಸಿರು ಎಲೆಗಳಲ್ಲಿ ಕಂಡುಬರುವ ಇವು, ಹಾರುವ ಲಕ್ಷಣವನ್ನು ಹೊಂದಿದೆ. ಇದರ ಮೇಲ್ಮೈ ಕಡುಹಸಿರು ಬಣ್ಣದಿಂದ ಕೂಡಿದೆ.
ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರಲು ವಿರೋಧವಿಲ್ಲ: ಕುಯಿಲಾಡಿ
ಉಡುಪಿ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಬರಲು ಯಾವುದೇ ವಿರೋಧವಿಲ್ಲ. ಆದರೆ, ಅವರನ್ನು ಏಕಾಏಕಿಯಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮೋದ್ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಈ ಹಿಂದೆ ನಮಗೆ ಎರಡ್ಮೂರು ಬಾರಿ ಕಹಿ ಅನುಭವ ಆಗಿದೆ. ದನ ಬಂದರೆ ಕರು ಬರುತ್ತದೆ ಎಂದು ಹೇಳಿದ್ದರು. ಆದರೆ ಅದು ಆಗಿಲ್ಲ. ಅವರ ಮಾನಸಿಕತೆ ಯಾವ […]