ಉಡುಪಿ: ಸ್ಕೂಟರ್ ಗೆ‌ ಲಾರಿ ಡಿಕ್ಕಿ; ಬಾಲಕಿ ಸ್ಥಳದಲ್ಲೇ ಮೃತ್ಯು

ಉಡುಪಿ: ಲಾರಿಯಡಿ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಅಂಬಾಗಿಲು ಬಳಿ ನಡೆದಿದೆ. ಮೃತ ಬಾಲಕಿಯನ್ನು ಪ್ರಣಮ್ಯ (8) ಎಂದು ಗುರುತಿಸಲಾಗಿದೆ. ಪ್ರಣಮ್ಯ ತಾಯಿಯೊಂದಿಗೆ ಸ್ಕೂಟರ್‌‌‌ ಹಿಂಬದಿಯಲ್ಲಿ ಕುಳಿತು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದಳು. ಈ ವೇಳೆ ಹಿಂದಿನಿಂದ ಬಂದ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಪ್ರಣಮ್ಯ ಲಾರಿಯಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ತಾಯಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಲಾರಿ ಚಾಲಕನ ವಿರುದ್ಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಎಸ್ ಬಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಪ್ರಮೋದ್ ಜಿ. ಕಾಮತ್ ವಿಧಿವಶ

ಉಡುಪಿ ಎಕ್ಸ್‌ಪ್ರೆಸ್‌: ಜಿಎಸ್ ಬಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಪ್ರಮೋದ್ ಜಿ. ಕಾಮತ್ ಅವರು ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನ ಹೊಂದಿದರು. ಇವರು ಮಂಗಳೂರಿನಲ್ಲಿ “ಜಿಎಸ್ ಬಿ ಹೆಲ್ಪ್ ಲೈನ್” ಸ್ಥಾಪಿಸುವ ಮೂಲಕ ನೂರಾರು ಬಡ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಾಷ್ಟ್ರಮಟ್ಟದ ಕ್ರೀಡಾಕೂಟ: ಕುಂದಾಪುರದ ಪ್ರಶಾಂತ್ ಶೆಟ್ಟಿಗೆ ಕಂಚು

ಮಹಾರಾಷ್ಟ್ರದಲ್ಲಿ ನ.11ರಿಂದ 14 ರ ವರೆಗೆ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದ ತ್ರಿಬಲ್ ಜಂಪ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಪ್ರಶಾಂತ್ ಶೆಟ್ಟಿ ಅವರು ಕಂಚಿನ ಪದಕ ಗಳಿಸಿದ್ದಾರೆ. ಅವರು 9.07 ಮೀಟರ್ ಉದ್ದ ಜಿಗಿಯುವ ಮೂಲಕ ಕಂಚಿನ ಪದಕ ಮುಡಿಗೇರಿಸಿಕೊಂಡರು. ಕುಂದಾಪುರ ಗಾಂಧಿ ಮೈದಾನದಲ್ಲಿ ಅಥ್ಲೆಟಿಕ್ ಕೋಚಿಂಗ್ ಅಕಾಡೆಮಿ ನಡೆಸುತ್ತಿದ್ದಾರೆ. Oakwood Indian school ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಜೆಕಾರು: ಮಹಿಳೆ ನೇಣಿಗೆ ಶರಣು

ಅಜೆಕಾರು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗುಳಿಬೆಟ್ಟು ಎಂಬಲ್ಲಿ ನಡೆದಿದೆ. ಎಣ್ಣೆಹೊಳೆಯ ಶುಭಾಷಿಣಿ(40) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಕಳೆದ 10 ವರ್ಷಗಳಿಂದ ಮಾನಸಿಕ ಖಾಯಿಲೆಗೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇತ್ತೀಚಿನ 4 ತಿಂಗಳಿನಿಂದ ಮಾನಸಿಕ ಖಾಯಿಲೆ ಉಲ್ಬಣಗೊಂಡಿದ್ದು, ಹೀಗಾಗಿ ಶುಭಾಷಿಣಿ ಅವರನ್ನು ಎಣ್ಣೆಹೊಳೆಯಲ್ಲಿರುವ ಅಕ್ಕನ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಅಲ್ಲಿ ಶುಭಾಷಿಣಿ ಮನೆಯಲ್ಲಿ ಯಾರು ಇಲ್ಲದ ವೇಳೆಯನ್ನು […]

ನೀರೆಬೈಲೂರಿನ ಧನುಷ್ ಕೈಯಲ್ಲಿರಳಿದ ಅದ್ಭುತ ಕಲಾಕೃತಿಗಳು ಇಲ್ಲಿದೆ ನೋಡಿ..!!

ಸುಂದರ ಮೂರ್ತಿಗಳ ಕೆತ್ತನೆಯ ಮೂಲಕ ಕಾರ್ಕಳ ತಾಲೂಕಿನ ನೀರೆಬೈಲೂರಿನ ಯುವಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಈತ ರಚಿಸಿರುವ ಅದ್ಭುತ ಕಲಾಕೃತಿಗಳನ್ನು ನೀವೊಮ್ಮೆ ನೋಡಿದ್ರೆ, ಮಾರುಹೋಗುದಂತು ಗ್ಯಾರಂಟಿ. ಹೌದು, ಇವು ಕಾರ್ಕಳ ನೀರೆಬೈಲೂರಿನ ಧನುಷ್ ಆಚಾರ್ಯ ಅವರ ಕೈಯಲ್ಲಿರಳಿದ ಅದ್ಭುತ ಕಲಾಕೃತಿಗಳು. ಈತ ಕಲಾಕೃತಿಗಳ ಕೆತ್ತನೆಯ ಅಭ್ಯಾಸ ನಡೆಸುತ್ತಿದ್ದು, ಕಲಿಕೆಯ ವೇಳೆಯೇ ತನ್ನ ಕಲಾಕೃತಿ ಕೆತ್ತನೆಯ ಪ್ರತಿಭೆಯ ಮೂಲಕ ಎಲ್ಲರನ್ನು ಆಕರ್ಷಿಸುತ್ತಿದ್ದಾನೆ. ಈತನ ಕೈಯಲ್ಲಿರಳಿದ ಕೆಲವೊಂದು ಕಲಾಕೃತಿಗಳನ್ನು‌ ಇಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.