ಮಣಿಪಾಲ: ನಾಳೆ (ಅ.30) ಉಚಿತ ನೇತ್ರ ತಪಾಸಣಾ ಶಿಬಿರ
ಮಣಿಪಾಲ: ಮಣಿಪಾಲ ಶ್ರೀ ದುರ್ಗಾಂಬಾ ಟ್ರಸ್ಟ್ ಇದರ ಆಶ್ರಯದಲ್ಲಿ ‘ನೇತ್ರಸಂಗಮ ಐ ಕೇರ್ ಆ್ಯಂಡ್ ಲೇಸರ್ ಸೆಂಟರ್ ಮಣಿಪಾಲ ಹಾಗೂ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ‘ ನ ಒಪ್ಟೊಮೆಟ್ರಿ ವಿಭಾಗ ಇದರ ಜಂಟಿ ಸಹಯೋಗದೊಂದಿಗೆ ಮಣಿಪಾಲ ಶ್ರೀ ದುರ್ಗಾಂಬಾ ಮಂದಿರದ ಸಭಾಭವನದಲ್ಲಿ ನಾಳೆ (ಅ. 30) ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಮಣಿಪಾಲದ ನೇತ್ರಸಂಗಮದ ತಜ್ಞ ನೇತ್ರವೈದ್ಯೆ ಡಾ. ಲಾವಣ್ಯ ರಾವ್ ಅವರಿಂದ ಕಣ್ಣಿನ ತಪಾಸಣೆ ಹಾಗೂ ಸಲಹೆ, ಕಾಂಟ್ಯಾಕ್ಟ್ ಲೆನ್ಸ್ […]
ಮಂಚಿಕೆರೆ: ಬೈಕ್ ಗೆ ಕಾರು ಡಿಕ್ಕಿ; ಸವಾರ ಗಂಭೀರ
ಮಣಿಪಾಲ: ಮಾರುತಿ ಸುಜುಕಿ ಸ್ವಿಫ್ಟ್ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಮಣಿಪಾಲದ ಮಂಚಿಕೆರೆಯ ನಾಗಬನದ ಸಮೀಪ ಇಂದು ಸಂಜೆ ಸಂಭವಿಸಿದೆ. ಗಾಯಗೊಂಡವರನ್ನು ಸ್ಥಳೀಯ ಮಂಚಿಕೆರೆಯ ಉಮೇಶ್ ಎಂದು ಗುರುತಿಸಲಾಗಿದೆ. ಕೇರಳ ನೋಂದಣಿ ಹೊಂದಿರುವ ಸ್ವಿಫ್ಟ್ ಕಾರು ಅತೀ ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್ ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಮದ್ಯಸೇವನೆ ಮಾಡಿದ್ದನು ಎನ್ನಲಾಗಿದೆ. ಇದರಿಂದ ಉಮೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ […]
ಉಡುಪಿ: ಮಿಷನ್ ಆಸ್ಪತ್ರೆಯ ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್ ‘ಕರುಣಾಲಯ’ ಉದ್ಘಾಟನೆ
ಉಡುಪಿ: ಉಡುಪಿಯ ಲೋಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ರತ್ರೆಯ ವತಿಯಿಂದ ಕೊರಂಗ್ರಪಾಡಿ ಬೈಲೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್ ‘ಕರುಣಾಲಯ’ ಶುಕ್ರವಾರ ಉದ್ಘಾಟನೆಗೊಂಡಿತು. ಯುನಿಟ್ ಅನ್ನು ಉದ್ಘಾಟಿಸಿ ಸಿಎಸ್‌ಐ ಕೆಎಸ್‌ಡಿ ಬಿಷಪ್ ರೆ.ಮೋಹನ್ ಮನೋರಾಜ್ ಮಾತನಾಡಿ, ಯುವ ಜನತೆ ಹಾಗೂ ಹಿರಿಯ ನಾಗರಿಕರು ಜೊತೆಯಾಗಿ ಸಾಗಿದಾಗ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದು. ಹಿರಿಯ ನಾಗರಿಕರನ್ನು ಮೂಲೆಗುಂಪು ಮಾಡುವ ಬದಲು ಅವರಲ್ಲಿನ ಜ್ಞಾನ, ಅನುಭವವನ್ನು ನಾವು ಪಡೆದುಕೊಳ್ಳಬೇಕು. ಇದರಿಂದ ನಮ್ಮ ಬೆಳವಣಿಗೆ ಸಾಧ್ಯವಾಗಲಿದೆ. ಹಿರಿಯ ನಾಗರಿಕರು […]
ಕ್ರೂರ ವಿಧಿಯು ಪುನೀತ್ ಅವರನ್ನು ನಮ್ಮಿಂದ ಕಿತ್ತುಕೊಂಡಿದೆ: ಪ್ರಧಾನಿ ಮೋದಿ ಸಂತಾಪ
ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಕ್ರೂರ ವಿಧಿಯು ಪುನೀತ್ ರಾಜ್‌ಕುಮಾರ್ ಎಂಬ ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ. ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಚಿತ್ರಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ. ಪುನೀತ್ ನಿಧನಕ್ಕೆ ಪೇಜಾವರ ಶ್ರೀ ಸಂತಾಪ: ಅಭಿನಯದಲ್ಲಿ ಅಪೂರ್ವ ಯಶಸ್ಸು ಸಂಪಾದಿಸುವುದರ ಜೊತೆಗೆ ಹತ್ತಾರು ಸೇವಾ […]
ಉಡುಪಿ: “ಸ್ಮರಣಿಕಾ”ದಲ್ಲಿ ಪಾರಂಪರಿಕ ಗೂಡುದೀಪ, ಎಲ್ಇಡಿ ಲೈಟ್ಸ್ ಗಳ ಪ್ರದರ್ಶನ ಮತ್ತು ಮಾರಾಟ
ಉಡುಪಿ: ಕಳೆದ 29 ವರ್ಷಗಳಿಂದ ಉಡುಪಿ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿರುವ ಸ್ಮರಣಿಕಾ, ಬಾಂಬೆ ಸ್ವೀಟ್ಸ್ ಹಾಗೂ ಅದರ ಸಹ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಪಾರಂಪರಿಕ ಶೈಲಿಯ ಗೂಡುದೀಪ, ಎಲ್ ಇಡಿ ಲೈಟ್ಸ್ ಬೃಹತ್ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಇದೀಗ ನಗರದ ಸಿಟಿ ಬಸ್ ನಿಲ್ದಾಣ ಬಳಿಯ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಸ್ಮರಣಿಕಾ, ಬಾಂಬೆ ಸ್ವೀಟ್ಸ್ ಸೆಂಟರ್ ಕಾರ್ಯಾಚರಿಸುತ್ತಿದೆ. ವೈವಿಧ್ಯ ವಸ್ತುಗಳ ಸಂಗ್ರಹ: ದೀಪಾವಳಿ ಹಬ್ಬಕ್ಕಾಗಿ ವಿಶೇಷವಾಗಿ ಬಳಸಲಾಗುವ ಮಣ್ಣಿನ ಹಣತೆ, ಮೂಡೆ ಮಾಡುವ […]