ದಕ್ಷಿಣ ಭಾರತದ ಪ್ರಸಿದ್ಧ ಭೀಮಾ ಜ್ಯುವೆಲ್ಲರ್ಸ್ ಮಾಲೀಕ, ಕೊಡುಗೈ ದಾನಿ ಕೃಷ್ಣನ್ ಇನ್ನಿಲ್ಲ

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಭೀಮಾ ಜ್ಯುವೆಲ್ಲರ್ಸ್ ಸಂಸ್ಥೆಗಳ ಮಾಲೀಕ ಕೊಡುಗೈದಾನಿ ಬಿ. ಕೃಷ್ಣನ್ ( 76) ಇಂದು ಸೋಮವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸಹಿತ ಅನೇಕ ಕಡೆಗಳಲ್ಲಿ ಭೀಮಾ ಜ್ಯುವೆಲ್ಲರ್ಸ್ ಮಳಿಗೆಗಳನ್ನು ಸ್ಥಾಪಿಸಿದ್ದಾರೆ. ಉಡುಪಿಯಲ್ಲೂ ಆಭರಣ ಮಳಿಗೆಯನ್ನು ಹೊಂದಿದ್ದಾರೆ. ಉದ್ಯಮದ ಲಾಭಾಂಶದಲ್ಲಿ ಹತ್ತಾರು ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಿಗೆ ಉದಾರ ದಾನ ನೀಡಿ […]

ಅ. 25ರಿಂದ 1ನೇ ತರಗತಿಯಿಂದಲೇ ಶಾಲೆ ಆರಂಭ

ಬೆಂಗಳೂರು: ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಇದೇ 25ರಿಂದ ಶಾಲಾ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಖಚಿತಪಡಿಸಿದ್ದು, ಮೊದಲ ಐದು ದಿನ ಅರ್ಧದಿನ ತರಗತಿ ಇರಲಿದೆ. ನ.1ರಿಂದ ಪೂರ್ಣಪ್ರಮಾಣದಲ್ಲಿ ಶಾಲೆ ಆರಂಭವಾಗಲಿದೆ. ನವೆಂಬರ್ ನಲ್ಲಿ‌ ಮಧ್ಯಾಹ್ನ ಬಿಸಿಯೂಟ ಕೂಡ ಶುರುವಾಗಲಿದೆ ಎಂದು ತಿಳಿಸಿದರು. ಈ ಸಂಬಂಧ ಮಾರ್ಗಸೂಚಿ ಹೊರಡಿಸಲಾಗಿದ್ದು, ಕೋವಿಡ್‌ ಮಾರ್ಗಸೂಚಿ ಪಾಲಿಸಿ ಶಾಲೆಗಳನ್ನು ಆರಂಭಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ತರಗತಿಗಳಿಗೆ ವಿದ್ಯಾರ್ಥಿಗಳು […]

ಕೃಷಿಕ ದಂಪತಿ ನೇಣಿಗೆ ಶರಣು: ಕಾರಣ ನಿಗೂಢ

ಪುತ್ತೂರು: ಕೃಷಿಕ ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಪಾದೆಕರ್ಯದಲ್ಲಿ ಎಂಬಲ್ಲಿ ನಡೆದಿದೆ. ಸುಬ್ರಹ್ಮಣ್ಯ ಭಟ್ (84) ಹಾಗೂ ಶಾರದಾ ಭಟ್ (78) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇಬ್ಬರೂ ಭಾನುವಾರ ರಾತ್ರಿ ಊಟ ಮಾಡಿ ಮನೆಯ ಕೆಳಗಿನ ಅಂತಸ್ತಿನ ಕೋಣೆಯಲ್ಲಿ ಮಲಗಿದ್ದರು. ಪುತ್ರ, ಅವರ ಪತ್ನಿ ಮತ್ತು ಮಕ್ಕಳು ಮಹಡಿಯ ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ರಾತ್ರಿ ಎಲ್ಲರು ಮಲಗಿದ ನಂತರ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌ ಎನ್ನಲಾಗಿದೆ. ಆತ್ಮಹತ್ಯೆಯ ಕಾರಣ ನಿಗೂಢವಾಗಿದೆ. […]

ಹಿರಿಯನಟ, ಕಿರುತೆರೆ ಕಲಾವಿದ ಶಂಕರ್‌ರಾವ್‌ ನಿಧನ

ಬೆಂಗಳೂರು: ಹಿರಿಯನಟ, ಕಿರುತೆರೆ ಕಲಾವಿದ ಶಂಕರ್‌ರಾವ್‌ (84) ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಶಂಕರರಾವ್‌ ಮೂಲತಃ ತುಮಕೂರಿನವರು. 1956ರಲ್ಲಿ ಬೆಂಗಳೂರಿಗೆ ಬಂದ ಅವರು. ‘ಗೆಳೆಯರ ಬಳಗ’ ಎಂಬ ರಂಗತಂಡ ಕಟ್ಟಿ ಅದರ ಮೂಲಕ ನಾಟಕ ಪ್ರದರ್ಶನ ಮಾಡುತ್ತಿದ್ದರು. ‘ನಟರಂಗ’ ತಂಡದ ಜೊತೆಗೂ ಶಂಕರ್ ರಾವ್ ಗುರುತಿಸಿಕೊಂಡಿದ್ದರು. ನಾಟಕಗಳಲ್ಲಿ ಶಂಕರರಾವ್‌ ಅಭಿನಯ ನೋಡಿದ ನಿರ್ಮಾಪಕರೊಬ್ಬರು ‘ಯಾರ ಸಾಕ್ಷಿ’ ಸಿನಿಮಾದಲ್ಲಿ ಅವರಿಗೆ ಮೊದಲ ಅವಕಾಶ ನೀಡಿದರು. ನಂತರ ಶಂಕರ್ ರಾವ್ ಅವರಿಗೆ ಸಾಲು ಅವಕಾಶಗಳು ಸಿಕ್ಕಿದವು. ‘ಪಾಪಪಾಂಡು’ ಧಾರಾವಾಹಿಯ […]

ರಾಜ್ಯ ಮಲೆಕುಡಿಯ ಸಂಘ: ಅ. 24ಕ್ಕೆ ಬೈಲಾ ರಚನಾ ಸಭೆ

ಕಾರ್ಕಳ: ರಾಜ್ಯ ಮಲೆಕುಡಿಯ ಸಂಘ, ಕರ್ನಾಟಕ ಇದರ ಸಂಘದ ನೋಂದಣಿ ಹಾಗೂ ಪುನಾರಚನೆ ಮಾಡಲು ತೀರ್ಮಾನಿಸಿದ್ದು, ಪೂರ್ವ ತಯಾರಿಯಾಗಿ ಬೈಲಾ ರಚನಾ ಸಭೆಯನ್ನು ಅ. 24 ರಂದು ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಕೊಯ್ಯುರು ಶಿವಗಿರಿ ಮಲೆಕುಡಿಯ ಸಮುದಾಯ ಭವನದಲ್ಲಿ ಕರೆಯಲಾಗಿದೆ. ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು, ನಾನಾ ಜಿಲ್ಲಾ ಸಂಘದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ನಾನಾ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಆಸಕ್ತರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಸಹಕರಿಸಬೇಕಾಗಿ ವಿನಂತಿಸಲಾಗಿದೆ.