ಉಡುಪಿ: “ಗ್ರಸ್ತ” ಕನ್ನಡ ಕಿರುಚಿತ್ರದ ಪೋಸ್ಟರ್ ಬಿಡುಗಡೆ
ಉಡುಪಿ: ಕನಸು ಕ್ರಿಯೇಷನ್ಸ್ ಪ್ರಸ್ತುತಪಡಿಸುವ “ಗ್ರಸ್ತ” ಕನ್ನಡ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಇಂದು ಉಡುಪಿಯ ನವರಸಮ್ ಸ್ಟುಡಿಯೋದಲ್ಲಿ ನಡೆಯಿತು. ಉಡುಪಿ ನವರಸಮ್ ಸ್ಟುಡಿಯೋದ ಪ್ರವೀಣ್ ಮರ್ಕಮೆ ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಶ್ರೀಶ ಎಳ್ಳಾರೆ ನಿರ್ದೇಶನದ ಜವಾಬ್ದಾರಿಯ ಜತೆಗೆ ಕಥೆ, ಸಂಕಲನವನ್ನು ಚಿತ್ರಕ್ಕೆ ಒದಗಿಸಿದ್ದಾರೆ. ಅಭಿಲಾಷ್ ಪೂಜಾರಿ ದೆಂದೂರುಕಟ್ಟೆ ಚಿತ್ರಕಥೆ ಮತ್ತು ಡಿಒಪಿ, ಪ್ರಜ್ವಲ್ ಆಚಾರ್ಯ ಸಹನಿರ್ದೇಶನ, ಪ್ರಜ್ವಲ್ ಸುವರ್ಣ vfx, ಡಬ್ಬಿಂಗ್ ನವರಸಮ್ ಸ್ಟುಡಿಯೋ, ಸಂತೋಷ್ ಪಚ್ಚಾರೆ ಪ್ರಚಾರ ಡಿಸೈನ್ […]
ಉಡುಪಿ: ನಾಳೆ (ಅ.18) “ಹರ್ಷ” ಸಮೂಹ ಸಂಸ್ಥೆಯ ಅತೀ ದೊಡ್ಡ ಗೃಹೋಪಕರಣಗಳ ನೂತನ ಮಳಿಗೆ ಉದ್ಘಾಟನೆ
ಉಡುಪಿ: ಹರ್ಷ ಸಮೂಹ ಸಂಸ್ಥೆಯ ಅತೀ ದೊಡ್ಡ ಗೃಹೋಪಕರಣಗಳ ನೂತನ ಮಳಿಗೆ ನಗರದ ಸಿಟಿಬಸ್ ನಿಲ್ದಾಣದ ಬಳಿಯ ನೂತನ “ಶ್ರೀ ದತ್ತಕೃಪಾ” ಕಟ್ಟಡದಲ್ಲಿ ನಾಳೆ (ಅ.18 ) ರಂದು ಸಂಜೆ 4.30 ಕ್ಕೆ ಉದ್ಘಾಟನೆಗೊಳ್ಳಲಿದೆ. ಉಡುಪಿಯ ಪ್ರಖ್ಯಾತ ವಾಣಿಜೋದ್ಯಮ ಸಂಸ್ಥೆಗಳಲ್ಲೊಂದಾದ “ಹರ್ಷ” ಸಮೂಹ ಸಂಸ್ಥೆಯು ಇದೀಗ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವಂತೆ ಗೃಹಬಳಕೆಯ, ಇಲೆಕ್ಟ್ರಾನಿಕ್ ವಸ್ತು, ಫರ್ನಿಚರ್ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ನೀಡಲಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಉಡುಪಿ ನಗರ ಸಭೆಯ ಮಾಜಿ […]
ಕಾರ್ಕಳ: “ಪವರ್ ಮಿನಿಷ್ಟರ್” ಕ್ಷೇತ್ರದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಗೋವು ಕಳ್ಳತನ.!
ಕಾರ್ಕಳ: ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಪಳ್ಳಿ ಎಂಬಲ್ಲಿ ಮತ್ತೆ ಗೋವು ಕಳ್ಳತನ ನಡೆದಿದೆ. ಪಳ್ಳಿಯ ಅಶೋಕ್ ನಾಯಕ್ ಎಂಬವರಿಗೆ ಸೇರಿದ ಸುಮಾರು ₹25 ಸಾವಿರ ಮೌಲ್ಯದ ದೇಶಿ ದನವೊಂದನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಶೋಕ್ ಎಂದಿನಂತೆ ಅ.14ರಂದು ಬೆಳಿಗ್ಗೆ ದನವನ್ನು ಹಟ್ಟಿಯಿಂದ ಮೇಯಲು ಬಿಟ್ಟಿದ್ದರು. ಆದರೆ ಅಂದು ದನ ಹಟ್ಟಿಗೆ ವಾಪಾಸ್ಸು ಬಂದಿರಲಿಲ್ಲ. ಅಶೋಕ್ ನಾಯಕ್ ಹಾಗೂ ಅವರ ಗೆಳೆಯರು ಪಳ್ಳಿ ಪೇಟೆಯಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಹೀಗಾಗಿ ಅ. 14ರ ಬೆಳಿಗ್ಗೆ 9ರಿಂದ ಅ.16ರ […]
ಕೇರಳದಲ್ಲಿ ಭಾರೀ ಮಳೆ, ಭೂಕುಸಿತ: 18 ಸಾವು, ಹಲವರು ನಾಪತ್ತೆ
ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ ಭಾರಿ ಮಳೆ ಮತ್ತು ಭೂಕುಸಿತ ಸಂಭವಿಸಿದ ಪರಿಣಾಮ 18 ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪಟ್ಟಣಂತಿಟ್ಟ, ಕೋಟಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಭಾರಿ ಮಳೆ ಸುರಿಯುತ್ತಿರುವ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡು, ಮಲಪ್ಪುರಂ, ಕೋಯಿಕೋಡ್ ಮತ್ತು ವಯನಾಡು ಜಿಲ್ಲೆಗಳಲ್ಲೂ […]
ರಾಜ್ಯದಲ್ಲಿ ನಾಳೆಯಿಂದ ಮಳೆ ತಗ್ಗುವ ಸಾಧ್ಯತೆ: ದ.ಕ., ಉಡುಪಿ ಜಿಲ್ಲೆಯಲ್ಲಿ ‘ಯೆಲ್ಲೊ ಅಲರ್ಟ್’
ಬೆಂಗಳೂರು: ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು (ಅ.17) ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಿರುವುದಾಗಿ ಇಲಾಖೆ ತಿಳಿಸಿದೆ. ದಿಢೀರ್ ತಗ್ಗಲಿದೆ ಮಳೆ: […]