ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

ಬೆಂಗಳೂರು: ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಟಿ20 ವಿಶ್ವಕಪ್‌ ತಂಡಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇಯ್‌ ಶಾ ತಿಳಿಸಿದ್ದಾರೆ. ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಟೂರ್ನಿಯು ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿದೆ. ಭಾರತವೇ ಈ ಟೂರ್ನಿಗೆ ಆತಿಥ್ಯ ವಹಿಸಲಿದೆ. ಟೀಮ್‌ ಇಂಡಿಯಾ ಆಟಗಾರರು ವಿರಾಟ್‌ ಕೊಹ್ಲಿ (ನಾಯಕ) ರೋಹಿತ್‌ ಶರ್ಮಾ (ಉಪ ನಾಯಕ) ಕೆ.ಎಲ್.ರಾಹುಲ್‌ ಸೂರ್ಯಕುಮಾರ್‌ ಯಾದವ್‌ ರಿಷಬ್‌ ಪಂತ್‌ (ವಿಕೆಟ್‌ ಕೀಪರ್‌) ಈಶಾನ್‌ […]

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಉಡುಪಿ ವಲಯಾಧ್ಯಕ್ಷರಾಗಿ ಜನಾರ್ದನ್ ಕೊಡವೂರು ಆಯ್ಕೆ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಉಡುಪಿ ವಲಯಾಧ್ಯಕ್ಷರಾಗಿ ಜನಾರ್ದನ್ ಕೊಡವೂರು ಅವರು ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷ- ಜಯಕರ ಸುವರ್ಣ, ಪ್ರಧಾನ ಕಾರ್ಯದರ್ಶಿ- ಪ್ರವೀಣ್ ಕೊರೆಯ, ಕೋಶಾಧಿಕಾರಿ- ದಿವಾಕರ್ ಹಿರಿಯಡಕ, ಉಪಾಧ್ಯಕ್ಷ- ಸುರಭಿ ಸುಧೀರ್ ಶೆಟ್ಟಿ ಮತ್ತು ಪ್ರವೀಣ್ ಹೂಡೆ, ಜೊತೆ ಕಾರ್ಯದರ್ಶಿ- ಪ್ರಕಾಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ- ಅಶೋಕ್ ಆತ್ರಾಡಿ, ಸಂಘಟನಾ ಕಾರ್ಯದರ್ಶಿ- ಮಂಜುನಾಥ್ ಪರ್ಕಳ ಮತ್ತು ದಾಮೋದರ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ- ಸತೀಶ್ ಶೇರಿಗಾರ್, ಹರೀಶ್ ಅಲೆವೂರು ಅವರು ನೇಮಕಗೊಂಡಿದ್ದಾರೆ. ಕಾರ್ಯಕಾರಿ ಸಮಿತಿ […]