ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ: ಜಾವೆಲಿನ್ ಥ್ರೋ ನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಅಥ್ಲೀಟ್ ವಿಭಾಗದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಾವೆಲಿನ್ ಥ್ರೋನಲ್ಲಿ 87.58 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪಕದ ಲಭಿಸಿದೆ.
“ಡ್ರೀಮ್ ಆಫ್ ಗೋವಾ” ಕನ್ನಡ ಆಲ್ಬಮ್ ಸಾಂಗ್ ಶೀಘ್ರದಲ್ಲೇ ಬಿಡುಗಡೆ
ಯುವ ಪ್ರತಿಭೆಗಳು ಎಲ್ಲಾ ಸೇರಿಕೊಂಡು ಕೆಸಿ ಕ್ರಿಯೇಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ಕನ್ನಡ ಕಾಮಿಡಿ ಆಲ್ಬಮ್ ಸಾಂಗ್ “ಡ್ರೀಮ್ ಆಫ್ ಗೋವಾ” ಅತೀ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಗೋವಾದಲ್ಲಿ ಈ ಆಲ್ಬಮ್ ಸಾಂಗ್ ಅನ್ನು ಚಿತ್ರೀಕರಿಸಲಾಗಿದೆ. ಕೆಸಿ ಕ್ರಿಯೇಷನ್ ಅರ್ಪಿಸುವ ಆಲ್ಬಮ್ ಸಾಂಗ್ ಅನ್ನು ಕೆ ಸಿ ಕ್ರಿಯೇಷನ್ ಕಥೆ ಹಾಗೂ ನಿರ್ಮಾಣ ಮಾಡಿರುತ್ತಾರೆ. ವಿಡಿಯೋಗ್ರಫಿ ಎಡಿಟಿಂಗ್ ಮತ್ತು ಡೈರೆಕ್ಷನ್ ಅನ್ನು ಅನಿಶ್ ಕಿನ್ನಿಗೋಳಿಯವರು ಮಾಡಿದ್ದು , ಸಂಗೀತ ನಿರ್ದೇಶನವನ್ನೂ ಅಭಿಜಿತ್ ಅಳದಂಗಡಿ ಮತ್ತು ಹಾಡಿದವರು ಸರಿಗಮಪ […]
ಉಡುಪಿ: ಆ. 10ರಂದು ಸನಾತನ ಯಕ್ಷಾಲಯದ 12ನೇ ವಾರ್ಷಿಕೋತ್ಸವ
ಉಡುಪಿ: ಯಕ್ಷಗುರು ರಾಕೇಶ್ ರೈ ಅಡ್ಕ ನೇತೃತ್ವದ ಸನಾತನ ಯಕ್ಷಾಲಯ ಮಂಗಳೂರು ಸಂಸ್ಥೆಯು ತನ್ನ 12ನೇ ವಾರ್ಷಿಕೋತ್ಸವವನ್ನು ಆಗಸ್ಟ್ 10ರ ಮಂಗಳವಾರ ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಅಂದು ಸಂಜೆ ಘಂಟೆ 4.00 ರಿಂದ ಪೂರ್ವರಂಗ ಮತ್ತು ಸಂಜೆ ಘಂಟೆ 4.30 ರಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇದರ ವಿದ್ಯಾರ್ಥಿಗಳಿಂದ ಅತೀ ಅಪರೂಪವಾಗಿ ಕಾಣಸಿಗುವ ಒಡ್ಡೋಲಗಗಳು ಹಾಗೂ ತೆರೆ ಕಲಾಸುಗಳ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಇತ್ತೀಚೆಗೆ ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರ ಅನುಕೂಲಕ್ಕೆ […]
ನೂತನ ಸಚಿವರಿಗೆ ಖಾತೆ ಹಂಚಿಕೆ: ವಿ. ಸುನಿಲ್ ಕುಮಾರ್ ಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ
ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಇದೀಗ ಮೊದಲ ಬಾರಿಗೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿರುವ ವಿ. ಸುನಿಲ್ ಕುಮಾರ್ ಅವರು ಪ್ರಬಲವಾದ ಇಂಧನ ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ. ಆಗಸ್ಟ್ 4ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಖಾತೆಗಳನ್ನು ಹಂಚಿಕೆ ಮಾಡಿದರು.
ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ.?
ಬೆಂಗಳೂರು: ನೂತನ ಸಚಿವರಿಗೆ ಕೊನೆಗೂ ಸಿಎಂ ಬಸವರಾಜ ಬೊಮ್ಮಾಯಿ ಖಾತೆಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಯಾರಿಗೆ ಯಾವ ಖಾತೆ..? ಬಸವರಾಜ್ ಬೊಮ್ಮಾಯಿ -(ಮುಖ್ಯಮಂತ್ರಿ) ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಸುನೀಲ್ ಕುಮಾರ್ -ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೋವಿಂದ್ ಕಾರಜೋಳ -ಮಧ್ಯಮ ನೀರಾವರಿ ಅಶೋಕ್ -ಕಂದಾಯ ಇಲಾಖೆ ಬಿ. ರಾಮುಲು -ಸಾರಿಗೆ, ಪರಿಶಿಷ್ಟ ಪಂಗಡ ಸಚಿವಾಲಯ ಆಚಾರ್ ಹಾಲಪ್ಪ -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಾ.ಕೆ.ಸುಧಾಕರ್ -ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕೆಎಸ್ ಈಶ್ವರಪ್ಪ- […]