ಚಾರ್ಮಾಡಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು: ಭಾರೀ ಮಳೆ ಹಾಗೂ ಭೂ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ಮಾರ್ಗದಲ್ಲಿ (ಎನ್‌.ಎಚ್‌–173) ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಲಘು ವಾಹನಗಳು ಹಗಲಿನಲ್ಲಿ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌, ಲಾರಿ, ಟೆಂಪೊ ಟ್ರಾವಲರ್, ಆಂಬುಲೆನ್ಸ್, ಕಾರು, ಜೀಪು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ಬೆಳಿಗ್ಗೆ 6ರಿಂದ ಸಂಜೆ 7 ಗಂಟೆವರೆಗೆ ಸಂಚರಿಸಲು ಅವಕಾಶ ಇದೆ. ಭಾರಿ ವಾಹನಗಳ ಸಂಚಾರಕ್ಕೆ ಪೂರ್ಣ ನಿರ್ಬಂಧಿಸಲಾಗಿದೆ. ಈ ನಿರ್ಬಂಧವು ಮುಂದಿನ ಆದೇಶದವರೆಗೆ ಜಾರಿಯಲ್ಲಿ […]

ಮಣಿಪಾಲ: ಪೆರಂಪಳ್ಳಿಯ ಬಾಲಕಿ ನಾಪತ್ತೆ; ಲುಕೌಟ್ ನೋಟಿಸ್ ಜಾರಿ

ಮಣಿಪಾಲ: ಕಳೆದ ಮೂರು ತಿಂಗಳ ಹಿಂದೆ ಮಣಿಪಾಲ ಪೆರಂಪಳ್ಳಿಯ ನಿವಾಸಿ ಆಶಾ ಡಿಸೋಜ ಎಂಬವರ ಪುತ್ರಿ ಅವೀನಾ (16) ಎಂಬಾಕೆ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ಬಾಲಕಿ ಅವೀನಾ ಎಪ್ರಿಲ್ 13ರಂದು ಪೆರಂಪಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಈವರೆಗೂ ಬಾಲಕಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಲುಕೌಟ್ ನೋಟಿಸ್ ಹೊರಡಿಸಿದ್ದಾರೆ. ಚಹರೆ: 4.5 ಮೀಟರ್ ಎತ್ತರವಿದ್ದು, ಗೋಧಿ […]

ಹೈಕಮಾಂಡ್ ಜತೆಗಿನ ಒಪ್ಪಂದಂತೆ ಬಿಎಸ್ ವೈ ರಾಜೀನಾಮೆ: ಸಂಸದ ಶ್ರೀನಿವಾಸ ಪ್ರಸಾದ್ ಸ್ಫೋಟಕ ಹೇಳಿಕೆ

ಚಾಮರಾಜನಗರ: ಬಿಜೆಪಿ ಸರ್ಕಾರ ರಚನೆ ಆದಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಹೈಕಮಾಂಡ್‌ ನಡುವೆ ಆಗಿದ್ದ ಒಪ್ಪಂದದಂತೆ ಯಡಿಯೂರಪ್ಪ ಅವರು ಈಗ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ಆದವರು ಮುಖ್ಯ ಹುದ್ದೆಗಳಲ್ಲಿ ಇರಬಾರದು ಎಂಬುದು ಪಕ್ಷದ ನಿಲುವು. ಹಾಗಿದ್ದರೂ ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಅವರಿಗೆ ವಯಸ್ಸಾಗಿದ್ದರೂ, ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಹೈಕಮಾಂಡ್ ಅವಕಾಶ ಕೊಟ್ಟಿತ್ತು. ಅಂದು […]

41 ವರ್ಷದ ಬಳಿಕ ಟೀಂ ಇಂಡಿಯಾದಲ್ಲಿ ಐದು ಆಟಗಾರರು ಒಂದೇ ಸಲ ಪದಾರ್ಪಣೆ

ಶ್ರೀಲಂಕಾ: ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಆರು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದ್ದು, 5 ಮಂದಿ ಪದಾರ್ಪಣೆ ಮಾಡಿದ್ದಾರೆ. ಸಂಜು ಸ್ಯಾಮ್ಸನ್​, ನಿತೀಶ್ ರಾಣಾ, ಚೇತನ್​ ಸಕಾರಿಯಾ, ಕೆ. ಗೌತಮ್​, ರಾಹುಲ್​ ಚಹರ್​​ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇನ್ನು ಉಪನಾಯಕ ಭುವನೇಶ್ವರ್​ ಕುಮಾರ್ ಜಾಗಕ್ಕೆ ನವದೀಪ್​ ಸೈನಿ ಕಣಕ್ಕಿಳಿದಿದ್ದು, ಹಾರ್ದಿಕ್​ ಪಾಂಡ್ಯ ಭುವಿ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. 41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟೀಮ್​ ಇಂಡಿಯಾದ […]

ಪೆರ್ಣಂಕಿಲ: ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ

ಉಡುಪಿ: ಕಟ್ಟಿಂಗೇರಿ ಗ್ರಾಮದ ಪೆರ್ಣಂಕಿಲ ಸಮೀಪದ ಗುಂಡುಪಾದೆ ಎಂಬ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸ್ಥಳೀಯರಲ್ಲಿ ಭೀತಿ‌ ಹುಟ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆಯ‌ ಬೋನಿನಲ್ಲಿ ಸೆರೆಯಾಗಿದೆ. ಗುಂಡುಪಾದೆ ಪರಿಸರದ ಜನರು ಕಳೆದ ಕೆಲವು ತಿಂಗಳಿನಿಂದ ಚಿರತೆಯ ಹಾವಳಿಯಿಂದ ಆತಂಕಕ್ಕೊಳಗಾಗಿದ್ದರು. ಅಲ್ಲದೆ, ಮನೆಯ ಸಾಕು ನಾಯಿಗಳು ಕಾಣೆಯಾಗುತ್ತಿರುವುದರಿಂದ ಸ್ಥಳೀಯರ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ಈ ಬಗ್ಗೆ ಮೂಡುಬೆಳ್ಳೆ ಗ್ರಾಪಂ ಅಧ್ಯಕ್ಷರು ಹಾಗೂ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ 15-20 ದಿನಗಳ ಹಿಂದೆ ಅರಣ್ಯ ಇಲಾಖೆಯವರು ಚಿರತೆಯ […]