ಉಡುಪಿ: ಮೊಬೈಲ್ ನಲ್ಲಿ ಆಡಬೇಡವೆಂದು ಬುದ್ಧಿವಾದ ಹೇಳಿದಕ್ಕೆ ಬಾಲಕ ಆತ್ಮಹತ್ಯೆ
ಉಡುಪಿ: ಪೋಷಕರು ಮೊಬೈಲ್‌ನಲ್ಲಿ ಗೇಮ್ ಆಡಬೇಡವೆಂದು ಬುದ್ಧಿಮಾತು ಹೇಳಿದ ಕಾರಣಕ್ಕಾಗಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಜೂರು ಗ್ರಾಮದ ಹೊಸ್ಕೋಟೆ ಎಂಬಲ್ಲಿ ನಡೆದಿದೆ. ಉಪ್ಪುಂದದ 8ನೇ ತರಗತಿಯ ವಿದ್ಯಾರ್ಥಿ ರೋಹನ್ (14) ಆತ್ಮಹತ್ಯೆಗೆ ಶರಣಾದ ಬಾಲಕ. ಈತ ಸದಾ ಮನೆಯ ರೂಮಿನಲ್ಲಿ ಏಕಾಂಗಿಯಾಗಿ ಇರುತ್ತಿದ್ದು, ಯಾವಾಗಲೂ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದನು. ಇದಕ್ಕೆ ಮನೆಯವರು ಮೊಬೈಲ್ ನಲ್ಲಿ ಗೇಮ್ ಆಡಬಾರದು, ಓದಿನ ಕಡೆ ಗಮನ ಕೊಡಬೇಕೆಂದು ಬುದ್ಧಿಮಾತು ಹೇಳಿದ್ದರು. ಇದೇ ವಿಚಾರಕ್ಕೆ ಕೋಪಗೊಂಡು ರೋಹನ್ ಮನೆಯಲ್ಲಿ ನೇಣು […]
ಬೇಕರಿ ತೆರೆಯಲು ಅನುಮತಿ ನೀಡುವಂತೆ ಶಾಸಕ ರಘುಪತಿ ಭಟ್ ಮನವಿ
ಉಡುಪಿ: ಕೋವಿಡ್ – 19 ನಿಯಂತ್ರಣ ಸಂಬಂಧ ರಾಜ್ಯದಲ್ಲಿ ಲಾಕ್‌ಡೌನ್ ಹೇರಿರುವುದರಿಂದ ಜಿಲ್ಲೆಯಲ್ಲಿ ಅಗತ್ಯವಸ್ತುಗಳನ್ನು ಹೊರತುಪಡಿಸಿ ಇತರ ಎಲ್ಲಾ ವ್ಯವಹಾರಗಳನ್ನು ನಡೆಸದಂತೆ ಆದೇಶ ಹೊರಡಿಸಲಾಗಿತ್ತು. ಆದರೆ ರೋಗಿಗಳಿಗೆ ಉಪಯೋಗವಿರುವ ಕೆಲವೊಂದು ಬೇಕರಿ ಉತ್ಪನ್ನಗಳ ಅವಶ್ಯಕತೆ ಇದ್ದುದರಿಂದ ಆಹಾರೋತ್ಪಾದನೆ ಅಡಿಯಲ್ಲಿ ಬೇಕರಿ ಉತ್ಪನ್ನಗಳನ್ನು ಉತ್ಪಾದಿಸಲು ಅನುಮತಿ ನೀಡಿ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಸಮಯಾವಕಾಶದಲ್ಲಿ ಬೆಳಿಗ್ಗೆ 6.00 ರಿಂದ 10.00 ರ ವರೆಗೆ ಬೇಕರಿಗಳನ್ನು ತೆರೆಯಲು ಅನುಮತಿ ನೀಡುವಂತೆ ಇಂದು ದಿನಾಂಕ 24-05-2021 ಶಾಸಕ ರಘುಪತಿ ಭಟ್ ಅವರು […]
ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಹಸ್ತಾಂತರಿಸಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ
ಉಡುಪಿ: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಸೋಂಕಿತರು ಮೃತಪಟ್ಟಲ್ಲಿ, ವ್ಯಕ್ತಿಯ ಮೃತದೇಹ ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ಬಾಕಿ ಬಿಲ್ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ. ಬಿಲ್ ಪಾವತಿ ಮಾಡದೆ ಇದ್ದ ಪಕ್ಷದಲ್ಲಿ ಸೋಂಕಿತನ ಮೃತದೇಹ ಹಸ್ತಾಂತರ ಮಾಡಲು ನಿರಾಕರಿಸುವಂತಿಲ್ಲ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆ. ರಾಜ್ಯದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳು ಮೃತಪಟ್ಟಿಲ್ಲಿ, ಆಸ್ಪತ್ರೆಯ ಹಾಗೂ ಚಿಕಿತ್ಸೆಯ ಬಾಕಿ ವೆಚ್ಚವನ್ನು ಪಾವತಿಸಿದ ನಂತರವೇ ಮೃತದೇಹವನ್ನು ಸಂಬಂಧಕರಿಗೆ ನೀಡುವ […]
ಉಡುಪಿ: ಇಂದು 927 ಮಂದಿಗೆ ಕೊರೊನಾ ಪಾಸಿಟಿವ್; ನಾಲ್ವರು ಮೃತ್ಯು
ಉಡುಪಿ: ಜಿಲ್ಲೆಯಲ್ಲಿ ಇಂದು 927 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 332, ಕುಂದಾಪುರ ತಾಲೂಕಿನಲ್ಲಿ 325, ಕಾರ್ಕಳ ತಾಲೂಕಿನಲ್ಲಿ 267 ಹಾಗೂ ಹೊರ ಜಿಲ್ಲೆಯ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5851ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 4 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿಯ ಇಬ್ಬರು ವ್ಯಕ್ತಿಗಳು ಹಾಗೂ ಕುಂದಾಪುರದ ಇಬ್ಬರು ಮಹಿಳೆಯರು ಸೋಂಕಿನಿಂದ ಅಸುನೀಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 306 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೇ 23 ರಂದು ಜಿಲ್ಲೆಯಲ್ಲಿ […]
ಕಾರ್ಕಳ: ಹಾರೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ
ಕಾರ್ಕಳ: ಹಾರೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಕಾರ್ಕಳದ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ಹರೀಶ್ ಪೂಜಾರಿ (42) ಎಂದು ಗುರುತಿಸಲಾಗಿದೆ. ಗುರುವ ಕೊಲೆಗೈದ ಆರೋಪಿ. ಹರೀಶ್ ಪೂಜಾರಿ ಹಾಗೂ ಗುರುವ ಇಬ್ಬರೂ ಕಳೆದ ಏಳು ತಿಂಗಳಿನಿಂದ ಮಾಳದ ರೀತಾ ಎಂಬ ಮಹಿಳೆಯ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹರೀಶ್ ವಿದ್ಯುತ್ ಕಂಬ ಹಾಕುವ ಕೆಲಸ ಮಾಡಿಕೊಂಡಿದ್ದರೆ, ರೀತಾ ಹಾಗೂ ಗುರುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೇ 23ರಂದು […]