ಸಂಕಷ್ಟದಲ್ಲಿರುವ ಕಲಾವಿದರು, ಕಾರ್ಮಿಕರಿಗೆ ನಟ ಉಪೇಂದ್ರರಿಂದ ನೆರವು

ಬೆಂಗಳೂರು: ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರರಂಗದ ಸಾವಿರಾರು ಕಾರ್ಮಿಕರು ಹಾಗೂ ಕಲಾವಿದರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ನಟ ಉಪೇಂದ್ರ ನೆರವಿನ ಹಸ್ತ ಚಾಚಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಉಪ್ಪಿ, ‘ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ. ವಿತರಣೆ ಬಗ್ಗೆ ತಮ್ಮ […]

ಉಡುಪಿ: ವಾಹನ ಸಂಚಾರ ಬಂದ್; ಪಡಿತರ ಅಕ್ಕಿ ಕೊಂಡೊಯ್ಯಲು ಜನರ ಪರದಾಟ

ಉಡುಪಿ: ಇಂದಿನಿಂದ ಮೇ 24ರ ವರೆಗೆ ರಾಜ್ಯಾದಾದ್ಯಂತ ಕೋವಿಡ್ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಾಹನ ಸಂಚಾರಕ್ಕೆ ಬಹುತೇಕ ಬ್ರೇಕ್ ಬಿದ್ದಿದ್ದು. ಹೀಗಾಗಿ ಪಡಿತರ ಖರೀದಿಸಿದವರು ಮನೆಗೆ ಸಾಗಿಸಲು ವಾಹನದ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ದೃಶ್ಯಗಳು ಉಡುಪಿ ನಗರ ಸಹಿತ ಮಣಿಪಾಲ, ಪರ್ಕಳ, ಕಟಪಾಡಿ, ಮೂಡುಬೆಳ್ಳೆ ಮೊದಲಾದ ಕಡೆ ಕಂಡುಬಂತು. ಖರೀದಿಸಿದಂತಹ ಸುಮಾರು 40, 50 ಕಿ.ಲೋ ಪಡಿತರ ಸಾಮಗ್ರಿಗಳನ್ನು ವಾಹನವೂ ಇಲ್ಲದೆ, ಹೊತ್ತುಕೊಂಡು ಹೋಗಲು ಆಗದೆ ಮನೆಗೆ ಸಾಗಿಸಲು ಪರದಾಡುವಂತಹ ಪರಿಸ್ಥಿತಿ ಅಲ್ಲಾಲ್ಲಿ […]

ಉಡುಪಿ: ಖ್ಯಾತ ಹಿರಿಯ ವಾದ್ಯ ಸಂಗೀತಗಾರ ಶತಾಯುಷಿ ಮಾರ್ಪಳ್ಳಿ ಕಾಳು ಶೇರಿಗಾರ್ ಇನ್ನಿಲ್ಲ

ಉಡುಪಿ: ಖ್ಯಾತ ಹಿರಿಯ ವಾದ್ಯ ಸಂಗೀತಗಾರ ಶತಾಯುಷಿ ಕುಕ್ಕಿಕಟ್ಟೆಯ ಮಾರ್ಪಳ್ಳಿ ಕಾಳು ಶೇರಿಗಾರ್ (104) ಕೋವಿಡ್ ಸೋಂಕಿನಿಂದ ಸೋಮವಾರ (ಮೇ 10) ನಿಧನ ಹೊಂದಿದರು. ಇವರು ವಾದ್ಯ ಸಂಗೀತದ ಮೂಲಕ ಅಪಾರ ಜನಮನ್ನಣೆಗಳಿಸಿದ್ದಾರೆ. ಕೊಡುಗೈ ದಾನಿಯೂ, ಸ್ವಾಭಿಮಾನಿಯೂ ಆದ ಕಾಳು ಶೇರಿಗಾರ್ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ಇಂದು ನಿಧನ ಹೊಂದಿದ್ದಾರೆ. ಅವರು 2 ಗಂಡು, 3  ಹೆಣ್ಣುಮಕ್ಕಳು ಹಾಗೂ ಅಪಾರ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು  ಅಗಲಿದ್ದಾರೆ.