ಉಡುಪಿ: ನಾಳೆ 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್, 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಲಸಿಕೆ

ಉಡುಪಿ: ನಾಳೆ (ಮೇ 11)ಯಿಂದ ಜಿಲ್ಲೆಯಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ನಾಲ್ಕು ಕೇಂದ್ರ ಗಳಲ್ಲಿ ಆರಂಭಗೊಳ್ಳಲಿದೆ. ಉಡುಪಿಯ ಜಿಲ್ಲಾಸ್ಪತ್ರೆ(ಸೈಂಟ್ ಸಿಸಿಲಿಸ್ ಶಾಲೆ), ಉಡುಪಿ ನಗರ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕುಂದಾಪುರ ತಾಲೂಕು ಆಸ್ಪತ್ರೆ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಮಧ್ಯಾಹ್ನ 2ಗಂಟೆಯಿಂದ ಲಸಿಕೆ ನೀಡುವ ಕಾರ್ಯ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ. ನೋಂದಣಿ ಕಡ್ಡಾಯ: ಈಗಾಗಲೇ ಕೋವಿನ್ […]

ಉಡುಪಿ: ಪೊಲೀಸ್ ಅಧೀಕ್ಷಕ ಕಚೇರಿಯ ನಿವೃತ್ತ ಆಡಳಿತಾಧಿಕಾರಿ ಎಂ. ಚಂದ್ರಶೇಖರ್ ಶೆಟ್ಟಿ ನಿಧನ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಚೇರಿಯ ನಿವೃತ್ತ ಆಡಳಿತಾಧಿಕಾರಿ ಎಂ. ಚಂದ್ರಶೇಖರ್ ಶೆಟ್ಟಿ (63) ಇಂದು ಹೃದಯಾಘಾತದಿಂದ (ಕೊರೊನಾ) ಸ್ವಗೃಹದಲ್ಲಿ ನಿಧನರಾದರು. ನಿವೃತ್ತಿಯ ಅನಂತರ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಇವರು ಮೂಲತ: ಕೊಕ್ಕಣೆ೯ ಬೈದೆಬೆಟ್ಟು ಸಮೀಪದ ಮೈಯಾರು ಮಕ್ಕಿಯವರು. ಪ್ರಸ್ತುತ ಉಡುಪಿಯಲ್ಲಿ ವಾಸವಾಗಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಡುಪಿ: ಲಾಕ್ ಡೌನ್ ಗೆ ಆಟೊ ಚಾಲಕ ಬಲಿ

ಉಡುಪಿ: ಲಾಕ್ ಡೌನ್ ಘೋಷಣೆಯಿಂದ ಮನನೊಂದ ಆಟೊ ಚಾಲಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ 76 ಬಡಗುಬೆಟ್ಟುವಿನ ಬೈಲೂರಿನಲ್ಲಿ ಇಂದು ನಡೆದಿದೆ. ಉಡುಪಿಯ ಮೀನು ಮಾರುಕಟ್ಟೆ ಬಳಿಯ ಆಟೋ ಸ್ಟ್ಯಾಂಡಿನ ಆಟೋ ಚಾಲಕ ಬೈಲೂರು ನಿವಾಸಿ ಯತಿರಾಜ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಕಾರಣದಿಂದ ಮನನೊಂದು ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿ: ಇಂದು 855 ಮಂದಿಗೆ ಕೊರೊನಾ ಪಾಸಿಟಿವ್; 3 ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದ್ದು, ಸೋಮವಾರ ಜಿಲ್ಲೆಯಲ್ಲಿ 855 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 6582ಕ್ಕೆ ಏರಿಕೆಯಾಗಿದೆ. ಉಡುಪಿ ತಾಲ್ಲೂಕಿನಲ್ಲಿ 452, ಕುಂದಾಪುರ 369, ಕಾರ್ಕಳ 30 ಹಾಗೂ ಹೊರ ಜಿಲ್ಲೆಯ 4 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೇ 9ರಂದು 2512 ಮಂದಿಯನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ. 642 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 3 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಉಡುಪಿ ತಾಲೂಕಿನ 72 ವರ್ಷದ […]

ಉಡುಪಿ: ಪೊಲೀಸರ ಲಾಠಿ ಪ್ರಹಾರದಿಂದ ತಪ್ಪಿಸಿಕೊಳ್ಳಲು ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್ ಸವಾರ; ವಿಡಿಯೋ‌ ಭಾರಿ ವೈರಲ್

ಕುಂದಾಪುರ: ಇಂದಿನಿಂದ ರಾಜ್ಯಾದ್ಯಂತ 14 ದಿನ ಕೋವಿಡ್‌ ಲಾಕ್ ಡೌನ್ ಜಾರಿಯಾಗಿದ್ದು, ಸರ್ಕಾರವು ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದೆ. ಲಾಕ್ ಡೌನ್ ನಿಂದ ಜನರು ನಾನಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ಪೈಕಿ‌ ಅಂಗಡಿಗೆ ಹೋಗಿ ಅಗತ್ಯ ವಸ್ತು ಖರೀದಿ ಮಾಡುವುದು ಕೂಡ ಜನರಿಗೆ ದೊಡ್ಡ ಸಮಸ್ಯೆ ಆಗಿದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಕುಂದಾಪುರ ತಾಲೂಕಿನ ಕುಂಭಾಸಿಯ ವಿನೇಂದ್ರ ಆಚಾರ್ಯ ಎಂಬುವವರು ವಿಡಂಬನಾತ್ಮಕವಾಗಿ ವೀಡಿಯೋ ಒಂದನ್ನು ತಯಾರಿಸಿದ್ದಾರೆ. ಹೌದು, ಕಳೆದೆರಡು ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಪೊಲೀಸರ ಲಾಟಿ […]