ನಾಗರಿಕ ಸಮಿತಿಯಿಂದ ಕೃತಕ ಕಾಲು ವಿತರಣೆ: ನಾಗರಿಕ ಸಮಿತಿಯ ಸಾಮಾಜಿಕ ಸೇವಾಕಾರ್ಯಗಳು ಮಾದರಿ- ಡಾ.ರವೀಂದ್ರನಾಥ್ ಶಾನುಭಾಗ್

ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ಆಯೋಜಿಸಿದ ಕಾಲು ಕಳೆದುಕೊಂಡಿರುವ ಅಸಹಾಯಕರಿಗೆ ಕೃತಕ ಕಾಲು ವಿತರಿಸುವ ಕಾರ್ಯಕ್ರಮವು ಮಾರುಥಿ ವೀಥಿಕಾ ಇಲ್ಲಿಯ ನಾಗರಿಕ ಸಮಿತಿ ಕಚೇರಿಯ ಆವರಣದಲ್ಲಿ ಶನಿವಾರ ನಡೆಯಿತು. ಉಡುಪಿ ಜಿಲ್ಲಾ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಶಾನುಭಾಗ್ ಅವರು, ಸುಭಾಷ್ ನಗರದ ವೆಂಕಟೇಶ್ ದೇವಾಡಿಗ ಅವರಿಗೆ ಕೃತಕ ಕಾಲು ವಿತರಿಸಿದರು. ಬಳಿಕ ಮಾತನಾಡಿದ ಅವರು, ನಾಗರಿಕ ಸಮಿತಿಯ ಸಾಮಾಜಿಕ ಸೇವಾಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ […]

ಉಡುಪಿ: ಶ್ವಾನಕ್ಕಾಗಿ ಜಗಳ; ಯುವಕನನ್ನು ಬಿಟ್ಟು ಯುವತಿಯೊಂದಿಗೆ ತೆರಳಿದ ಶ್ವಾನ!

ಉಡುಪಿ: ಶ್ವಾನಕ್ಕಾಗಿ ಯುವಕ ಯುವತಿ ಜಗಳ ಮಾಡಿಕೊಂಡ ವಿಚಿತ್ರ ಘಟನೆಯೊಂದು ನಗರದ ಅಜ್ಜರಕಾಡು ಪೆಟ್‌ಶಾಪ್‌ ಬಳಿ ನಡೆದಿದೆ. ಏನಿದು ಪ್ರಸಂಗ: ಅಜ್ಜರಕಾಡಿನ ಪೆಟ್ ಶಾಪ್ ಬಳಿ‌ ಯುವಕನೊಬ್ಬ ತನ್ನ ಕಪ್ಪುಬಣ್ಣದ ಸಾಕು ನಾಯಿಯನ್ನು ಕರೆದುಕೊಂಡು ಬಂದಿದ್ದನು. ಇದೇ ವೇಳೆ ಅಲ್ಲಿಗೆ ಯುವತಿಯೊಬ್ಬಳು ಬಂದಿದ್ದು, ಯುವಕನ ಬಳಿಯಲ್ಲಿ ಇದ್ದ ನಾಯಿಯನ್ನು ಕಂಡು ಇದು ನನ್ನ ಸಾಕು ನಾಯಿ. ಆರೇಳು ತಿಂಗಳ ಹಿಂದೆ ಕಾಣೆಯಾಗಿತ್ತು. ನಿನಗೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾಳೆ. ಆಗ ಯುವಕ ಕೂಡ ಇದು ನನ್ನ ನಾಯಿ. […]

ಪರ್ಕಳ ಪೇಟೆಯ ಹೆದ್ದಾರಿ ಅಗಲೀಕರಣ ಕಾಮಗಾರಿ: ಕಟ್ಟಡ ತೆರವಿಗೆ ಸ್ಥಳೀಯರ ವಿರೋಧ, ಅರ್ಧಕ್ಕೆ ಸ್ಥಗಿತಗೊಂಡ ತೆರವು ಕಾರ್ಯಾಚರಣೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169(ಎ) ಅಗಲೀಕರಣ ಕಾಮಗಾರಿ ಪರ್ಕಳ ಪೇಟೆಯಲ್ಲಿ ಆರಂಭವಾಗಿದ್ದು, ಇದೀಗ ಪೇಟೆಯಲ್ಲಿದ್ದ ಕಟ್ಟಡ ತೆರವು ಕಾರ್ಯಕ್ಕೆ ಇಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಕಟ್ಟಡ ತೆರವು ಮಾಡುವ ಬಗ್ಗೆ ಹೆದ್ದಾರಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡಿಲ್ಲ. ಅಲ್ಲದೆ, ನೋಟಿಸ್ ಕೂಡ ಜಾರಿ ಮಾಡಿಲ್ಲ. ಏಕಾಏಕಿಯಾಗಿ ತೆರವು ಕಾರ್ಯ ಆರಂಭಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಆಗಮಿಸಿ […]

ಉಡುಪಿ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟ ಖದೀಮರು

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಹೆಸರಿನಲ್ಲಿ ಯಾರೋ ಖದೀಮರು ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ವೈಯಕ್ತಿಕ ಫೇಸ್‌ಬುಕ್ ಖಾತೆಯಾಗಿರುವ ಜಿ. ಜಗದೀಶ್ ಮಲಲಗದ್ದೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ, ಹಲವು ಮಂದಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಲಾಗಿದೆ. ಬಹುತೇಕ ಮಂದಿ ಇವರ ನಕಲಿ ಖಾತೆಯಲ್ಲಿ ಫ್ರೆಂಡ್ಸ್ ಆಗಿದ್ದಾರೆ. ಈ ನಕಲಿ ಖಾತೆಯಲ್ಲಿ ಫ್ರೆಂಡ್ಸ್ ಆಗಿರುವವರಿಗೆ ಕಿಡಿಗೇಡಿಗಳು ಸಂದೇಶ ಕಳುಹಿಸಿ ತುರ್ತು ಹಣ […]

ರಜತ ಸಂಭ್ರಮದಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾ: ಏ.14ರಂದು ಒಂದು ವರ್ಷದ ‘ರಜತ ಪಥದಲ್ಲಿ ವಿಪ್ರ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ

ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾ 1996ರಲ್ಲಿ ಆರಂಭವಾಗಿ ಇದೀಗ 2022ರಲ್ಲಿ ಸಂಸ್ಥೆಯು 25 ಸಾರ್ಥಕ ಸಂವತ್ಸರಗಳನ್ನು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಎಪ್ರಿಲ್ 2021ರಿಂದ ಎಪ್ರಿಲ್ 2022 ರವರೆಗೆ ಒಂದು ವರ್ಷದ ಕಾಲ ‘ರಜತ ಪಥದಲ್ಲಿ ವಿಪ್ರ ನಡಿಗೆ’ ಎಂಬ ಶಿರೋನಾಮೆಯಡಿಯಲ್ಲಿ ರಜತೋತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶಾಶ್ವತ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಮಹಾಸಭಾ ನಿರ್ಧರಿಸಿದೆ. ಅದರಂತೆ ಇದೇ ಎಪ್ರಿಲ್ 14ರಂದು ಯುಗಾದಿಯ ಪರ್ವ ಕಾಲದಲ್ಲಿ ಕೊಡವೂರಿನ ವಿಪ್ರಶ್ರೀ ಕಲಾಭವನದಲ್ಲಿ ‘ಕೊಡವೂರು […]