ಉಡುಪಿ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ: ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಲು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ರಚಿಸಲಾಗಿರುವ ಕೋವಿಡ್ ನಿಯಂತ್ರಣ ಕುರಿತ ಕಾರ್ಯಪಡೆಗಳು ಹಾಗೂ […]

ಭಾರತದ ಮೊದಲ ಮಹಿಳಾ ಕ್ರಿಕೆಟ್ ನಿರೂಪಕಿ ಚಂದ್ರಾ ನಾಯ್ಡು ನಿಧನ

ಇಂದೋರ್: ಭಾರತದ ಮೊದಲ ಮಹಿಳಾ ಕ್ರಿಕೆಟ್ ನಿರೂಪಕಿ ಹಾಗೂ ಭಾರತದ ಮೊದಲ ಟೆಸ್ಟ್ ನಾಯಕ ಸಿ.ಕೆ. ನಾಯ್ಡು ಅವರ ಪುತ್ರಿ ಚಂದ್ರಾ ನಾಯ್ಡು (88) ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ನಿಧನ ಹೊಂದಿದರು. ಅವರು 1977 ರಲ್ಲಿ ಇಂದೋರ್‌ನಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಬಾಂಬೆ (ಈಗಿನ ಮುಂಬೈ) ಮತ್ತು ಎಂಸಿಸಿ ನಡುವಿನ ಪಂದ್ಯದ ವೇಳೆ ಮೊದಲ ಕಮೆಂಟರಿ ನೀಡಿದ್ದರು.

ಕ್ರೀಡೆಗೆ ಎಲ್ಲರನ್ನೂ ಜತೆಗೂಡಿಸುವ ಶಕ್ತಿಯಿದೆ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ

ಉಡುಪಿ: ದಿನನಿತ್ಯದ ಜಂಜಾಟಗಳಿಂದ‌ ಸದಾ ಒತ್ತಡದಲ್ಲಿರುವ ಜನರನ್ನು ಒಂದೆಡೆ ಸೇರಿಸಿ ಯಾವುದೇ ವಯೋಮಿತಿಗೆ ಕಡಿವಾಣ ಹಾಕದೆ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟ ಈ ಕ್ರೀಡಾಕೂಟ ಬಹಳ ಅರ್ಥಪೂರ್ಣವಾದುದು. ಕ್ರೀಡೆಗೆ ಎಲ್ಲಾ‌ ಮನಸ್ಸುಗಳನ್ನು ಜೊತೆಯಾಗಿಸುವ ಶಕ್ತಿ ಇದೆ ಎಂದು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಹೇಳಿದರು. ಅವರು ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಪ್ರಯುಕ್ತ ಚರ್ಚ್ ಪಾಲನಾ ದಿವಸದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಆಟದಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಇಂದು ಗೆದ್ದವರು ನಾಳೆ ಸೋಲಬಹುದು ಅಂತೆಯೇ ಇಂದು ಸೋತವರು ನಾಳೆ ಗೆಲ್ಲಬಹುದು. ಸೋಲು-ಗೆಲುವು […]

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ನ್ಯಾಷನಲ್ ಇನ್ಶ್ಯೂರೆನ್ಸ್ ಪ್ರಬಂಧಕರಿಗೆ ಅಭಿನಂದನೆ

ಉಡುಪಿ: ಸುವರ್ಣ ತ್ರಿಭುಜ ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದ ₹40 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಮಂಜೂರು ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ನ್ಯಾಷನಲ್ ಇನ್ಶ್ಯೂರೆನ್ಸ್‍ನ ಹಿರಿಯ ವಿಭಾಗೀಯ ಪ್ರಬಂಧಕಿ ಪ್ರತಿಭಾ ಶೆಟ್ಟಿ ಅವರನ್ನು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಆಧ್ಯಕ್ಷ ಯಶ್‍ಪಾಲ್ ಸುವರ್ಣ ಸನ್ಮಾನಿಸಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಪ್ರತಿಭಾ ಶೆಟ್ಟಿ, ವಿಮಾ ಪರಿಹಾರ ಮಂಜೂರಾತಿ ಪ್ರಕ್ರಿಯೆಯಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ಹಾಗೂ ಮೀನುಗಾರರ ಸಂಘದ ಪೂರಕ ಸಹಕಾರದಿಂದ ಈ ಗರಿಷ್ಠ ಮೊತ್ತ ಪರಿಹಾರ ನೀಡಲು […]

ಹುತಾತ್ಮ ಯೋಧರಿಗೆ ಕಾರ್ಕಳ ನಗರ ಎಬಿವಿಪಿ ಘಟಕದಿಂದ ನುಡಿನಮನ

ಕಾರ್ಕಳ: ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿಗೆ ಹುತಾತ್ಮರಾದ ಯೋಧರಿಗೆ ಕಾರ್ಕಳ ನಗರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಕಾರ್ಕಳದ ಆನೆಕೆರೆಯ ಅಮರ್ ಜವಾನ್ ಸ್ಮಾರಕದಲ್ಲಿ ಇಂದು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳನ್ನುದ್ದೇಶಿಸಿ ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್ ಮಾತನಾಡಿ, ಕೇಂದ್ರ ಸರಕಾರವು ಸೈನಿಕರ ಬಲಿದಾನಕ್ಕೆ ನ್ಯಾಯವನ್ನು ದೊರಕಿಸಿಕೊಟ್ಟು ಸೈನಿಕರ ಹಿತ ಕಾಯಬೇಕು. ಕಮ್ಯುನಿಸ್ಟ್ ಸೈದ್ಧಾಂತಿಕ ಮನಸ್ಥಿತಿ ಈ ಘಟನೆಗೆ ಕಾರಣ ಹಾಗೂ ಭಯೋತ್ಪಾದಕರಿಗೆ ಇರುವ ಮಾನವ ಹಕ್ಕು ಸೈನಿಕರಿಗೆ ಯಾಕಿಲ್ಲ ಎಂದು ಅವರು ಪ್ರಶ್ನಿಸಿದರು. […]