ಮಣಿಪಾಲ: ಎಂಟಿಎಲ್ ನಿಂದ ಗೆಟ್ ಮೈ ಕ್ಲಾಸ್ ಪ್ಲಾಟ್ ಫಾರ್ಮ್
ಮಣಿಪಾಲ: ಮಣಿಪಾಲ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್ (ಎಂಟಿಎಲ್) ಜೆಇಇ, ನೀಟ್, ಮತ್ತು ಸಿಇಟಿಯಂಥ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧರಾಗುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ ಆನ್‌ಲೈನ್ ಪರೀಕ್ಷೆಯ ಸಿದ್ಧತೆಗಾಗಿ GetMiClass (ಗೆಟ್‌ಮೈಕ್ಲಾಸ್) ಫ್ಲ್ಯಾಟ್‌ಫಾರ್ಮ್ ಅನ್ನು ಪರಿಚಯಿಸಿದೆ. ಪ್ರಸಕ್ತ ವರ್ಷದ ಪಠ್ಯದ ಪ್ರಶ್ನೆಗಳಲ್ಲದೆ ಈ ಹಿಂದಿನ ವರ್ಷಗಳ ಸಿಇಟಿ, ಜೆಇಇ ಮತ್ತು ನೀಟ್ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಆಯ್ದ 2,000ಕ್ಕೂ ಅಧಿಕ ಪ್ರಶ್ನೆಗಳಿಗೆ ತಜ್ಞರು ನೀಡಿದ ಉತ್ತರಗಳನ್ನು ಒಳಗೊಂಡ ವೀಡಿಯೋಗಳನ್ನು ಈ ಫ್ಲ್ಯಾಟ್‌ಫಾರ್ಮ್ ಒಳಗೊಂಡಿದೆ. ಅಷ್ಟು […]
ಉಡುಪಿ ಜಿಲ್ಲೆಯಲ್ಲಿ ತಗ್ಗಿದ ಕೊರೊನಾ ಅಬ್ಬರ: 71 ಮಂದಿಗೆ ಪಾಸಿಟಿವ್
ಉಡುಪಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಅಬ್ಬರಿಸಿದ ಕೊರೊನಾದ ವೇಗ ತಗ್ಗಿದ್ದು, ಇಂದು 71 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕಂಟೈನ್ ಮೆಂಟ್ ಝೋನ್ ಆಗಿರುವ ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ 41 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಉಡುಪಿ ತಾಲೂಕಿನಲ್ಲಿ 53, ಕುಂದಾಪುರದಲ್ಲಿ 13 ಹಾಗೂ ಕಾರ್ಕಳದಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆ ಸೈಟ್ ನಿವೇಶನ ಹಗರಣ ಸಂತ್ರಸ್ತರ ಸಭೆ
ಉಡುಪಿ: ಉಡುಪಿ ಜಿಲ್ಲೆಯ ನಿವೇಶನ ಹಗರಣ ಸಂತ್ರಸ್ತರು ತಮಗೆ ಒದಗಿರುವ ಸಮಸ್ಯೆ ಹಾಗೂ ಅನ್ಯಾಯದ ಬಗ್ಗೆ ಚರ್ಚಿಸಲು ಅಜ್ಜರಕಾಡು ಸಾರ್ವಜನಿಕ ಉದ್ಯಾನದಲ್ಲಿ ಮಾ.28ರಂದು ಮುಂದೆ ತೆಗೆದುಕೊಳ್ಳಬೇಕಾದ ಕಾನೂನು ಸಲಹೆ ಕ್ರಿಯೆ ಬಗ್ಗೆ ಚರ್ಚಿಸಿದರು. ಇದರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು ಮತ್ತು ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ತಮ್ಮ ಇಂದಿನ ಪ್ರಸ್ತುತ ಅಸಹಾಯಕ ಪರಿಸ್ಥಿತಿಯು ಬಹಳಷ್ಟು ನೋವು ಮತ್ತು ತೊಂದರೆಗಳನ್ನು ತಂದಿದೆ. ಮನೆ ನಿರ್ಮಿಸಲು ನಾವು ಸಣ್ಣ ಭೂಮಿಯನ್ನು ಖರೀದಿಸಿದ್ದೇವೆ. ಆದರೆ ಇಂದು ನಾವು ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದನ್ನು […]
ಭಾರತೀಯ ಸೇನಾ ಗಡಿಭದ್ರತಾ ಪಡೆಗೆ ಬಲ್ನಾಡಿನ ರಮ್ಯ, ಕಾಣಿಯೂರಿನ ಯೋಗಿತಾ ಎಂ. ಆಯ್ಕೆ
ಯೋಗಿತಾ ಎಂ. ಕಾಣಿಯೂರು ಪುತ್ತೂರು: ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವತಿಯರು ಭಾರತೀಯ ಸೇನಾ ಗಡಿಭದ್ರತಾ ಪಡೆ (ಇಂಡಿಯನ್ ಸೆಕ್ಯುರಿಟಿ ಫೋರ್ಸ್) ಗೆ ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕಿನ ಬಲ್ನಾಡಿನ ರಮ್ಯ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಅವರು ಬಿಎಸ್ಎಫ್ ಗೆ ಆಯ್ಕೆಯಾಗಿದ್ದು, ಎ.1ರಿಂದ ಸೇನಾ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ. ಬಲ್ನಾಡಿನ ರಮ್ಯ: ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜವತಿ ದಂಪತಿಗಳ ಪುತ್ರಿ. ಬಲ್ನಾಡು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ […]
ಕುಂದಾಪುರ: ಕಾರು ಅಪಘಾತ; ಮಹಿಳೆ ಮೃತ್ಯು, ಮೂರು ತಿಂಗಳ ಮಗು ಪವಾಡಸದೃಶವಾಗಿ ಪಾರು
ಕುಂದಾಪುರ: ಕಾರೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಮೃತಟ್ಟಿದ್ದು, ನಾಲ್ವರು ಮಕ್ಕಳು ಸಹಿತ ಐವರು ಗಾಯಗೊಂಡ ಘಟನೆ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಮೃತರನ್ನು ಕೆಮ್ಮಣ್ಣು ಗ್ರಾಮ ಹೂಡೆ ನಿವಾಸಿ ಸಿಬ್ಗತುಲ್ಲಾ ಎಂಬವರ ಪತ್ನಿ ಸುಹಾನ(30) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸಿಬ್ಗತುಲ್ಲಾ ಮತ್ತು ಅವರ ಮಕ್ಕಳಾದ ಸಾಹಿಮ್ (7), ಸಿದ್ರಾ(4), ಮನ್ಹಾ (2) ಮತ್ತು ಮೂರು ತಿಂಗಳ ಮಗು ಮರಿಯಮ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಭಟ್ಕಳದಿಂದ ಹೂಡೆಗೆ ಬರುತ್ತಿದ್ದ ವೇಳೆ […]