ಅಲೆವೂರು: 30ನೇ ವರ್ಷದ ಶ್ಯಾಮ ಸುಂದರಿ ಟ್ರೋಫಿ-2021′ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ
ಅಲೆವೂರು: ನೆಹರು ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ ಅಲೆವೂರು ಇದರ ಆಶ್ರಯದಲ್ಲಿ ಅಲೆವೂರು ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ 30ನೇ ವರ್ಷದ ಉಡುಪಿ ಜಿಲ್ಲಾಮಟ್ಟದ ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟಕ್ಕೆ ‘ಶ್ಯಾಮ ಸುಂದರಿ ಟ್ರೋಫಿ-2021’ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ವರ್ವಾಡಿ ಪ್ರಸಾದ್ ಶೆಟ್ಟಿ ಭಾನುವಾರ ಚಾಲನೆ ನೀಡಿದರು. ಅಲೆವೂರು ವಿಷ್ಣುಮೂರ್ತಿ ಟ್ರಾವೆಲ್ಸ್ ಮಾಲೀಕ ರಾಮಚಂದ್ರ ಕೊಡಂಚ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕ್ರಿಕೆಟ್ ಆಟಗಾರ್ತಿ ಏಕ್ತಾ ಪಟೇಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಹರೀಶ್ ಕಿಣಿ […]
ಮತ್ತೆ ಕಾಂಗ್ರೆಸ್ ಕಡೆಗೆ ಮುಖ ಮಾಡಿದ ಕೆಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ?
ಉಡುಪಿ: ಕೆಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ, ಯುವ ಉದ್ಯಮಿ ಅಮೃತ್ ಶೆಣೈ ಅವರು ಮಾತೃಪಕ್ಷ ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಹುಟ್ಟು ಕಾಂಗ್ರೆಸ್ಸಿಗನಾಗಿದ್ದ ಅಮೃತ್ ಶೆಣೈ ಅವರು ಕಾಂಗ್ರೆಸ್ ನಲ್ಲಿ ಉತ್ತಮ ನಾಯಕನಾಗಿ ಹೊರಹೊಮ್ಮಿದ್ದರು. ಇವರ ಸಂಘಟನ ಚತುರತೆ ಹಾಗೂ ವಾಕ್ ಚಾತುರ್ಯವನ್ನು ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಎಐಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿತ್ತು. ಆದರೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕ ನಡೆಯಿಂದ ಅಸಮಾಧಾನಗೊಂಡ ಅವರು ಪಕ್ಷೇತರ […]
ಉಡುಪಿ: ಆಡುತ್ತಿರುವಾಗಲೇ ಹೃದಯಾಘಾತದಿಂದ ಕೊನೆಯುಸಿರೆಳೆದ ರಾಜ್ಯಮಟ್ಟದ ವಾಲಿಬಾಲ್ ಆಟಗಾರ
ಉಡುಪಿ: ವಾಲಿಬಾಲ್ ಆಟವಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ರಾಜ್ಯಮಟ್ಟದ ವಾಲಿಬಾಲ್ ಆಟಗಾರನೋರ್ವ ಮೃತಪಟ್ಟ ಘಟನೆ ಶನಿವಾರ ರಾತ್ರಿ ಉಡುಪಿಯ ಇನ್ನಂಜೆಯಲ್ಲಿ ನಡೆದಿದೆ. ಮೃತನನ್ನು ಕುರ್ಕಾಲು ಸುಭಾಸ್ ನಗರ ನಿವಾಸಿ, ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಪಕ್ಕಿ ದೇವು ಯಾನೆ ದೇವರಾಜ್ (33) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಇನ್ನಂಜೆಯಲ್ಲಿ ನಡೆಯುತ್ತಿದ್ದ ಇನ್ನಂಜೆ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇನ್ನಂಜೆ ಚಾಲೆಂಜರ್ಸ್ ತಂಡದ ಪರವಾಗಿ ದೇವರಾಜ್ ಆಟವಾಡುತ್ತಿದ್ದರು. ರಾತ್ರಿ ಒಂದು ಗಂಟೆಯ ವೇಳೆಗೆ ಆಟವಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ದೇವರಾಜ್ ಅಂಗಣದಲ್ಲೇ ಕುಸಿದುಬಿದ್ದರು. ಕೂಡಲೇ ಅವರನ್ನು ಉಡುಪಿಯ […]