ಸೇನಾ ಕ್ಯಾಂಪ್ ಗೆ ಜಿಲ್ಲಾಡಳಿತ ಊಟ ತಿಂಡಿ, ವಸತಿ ವ್ಯವಸ್ಥೆ ಮಾಡಿದೆ; ಡಿಸಿ
ಉಡುಪಿ: ಇಲ್ಲಿನ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ಕ್ಯಾಂಪ್ ಆರ್ಮಿ ಸಂಘಟಿಸಿದ ಕ್ಯಾಂಪ್. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡಿದ್ದು, ಊಟ ತಿಂಡಿ ಕುಡಿಯುವ ನೀರು ಮತ್ತು ಉಳಿಯುವ ವ್ಯವಸ್ಥೆ ಸರ್ಕಾರದ ಒಂದು ರೂಪಾಯಿ ಖರ್ಚಿಲ್ಲದೆ ದಾನಿಗಳ ಸಹಕಾರದಿಂದ ಮಾಡಿದೆ. ಆದರೆ ಕೆಲವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿ ಅಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಡಳಿತ ಸುಮಾರು 6 ಕಡೆ ಉಳಿಯುವ ವ್ಯವಸ್ಥೆ ಮಾಡಿದೆ. ಯಾವುದೇ ಜಿಲ್ಲೆಯಲ್ಲಿ ಊಟ ಮತ್ತು […]
ದೇಶದ ಭವಿಷ್ಯದ ಸೈನಿಕರು ರಸ್ತೆ ಬದಿ ರಾತ್ರಿ ಕಳೆದಿರುವುದು ಜಿಲ್ಲಾಡಳಿತಕ್ಕೆ ಕಾಣುವುದಿಲ್ಲವೇ: ಅಶೋಕ್ ಕುಮಾರ್ ಕೊಡವೂರು
ಉಡುಪಿ: ಉಡುಪಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ಭಾರತೀಯ ಸೇನೆಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ನಮ್ಮ ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಿಂದ ಸಾವಿರಾರು ಯುವಕರು ಉಡುಪಿ ನಗರಕ್ಕೆ ಬಂದಿಳಿದಿದ್ದಾರೆ. ಬಂದವರಿಗೆ ಆಯ್ಕೆ ಸಮಿತಿಯು ಯಾವುದೇ ವಸತಿ ಊಟ ಸೌಕರ್ಯಗಳನ್ನು ವ್ಯವಸ್ಥೆ ಮಾಡಿದಂತೆ ಕಾಣುತ್ತಿಲ್ಲ. ಬಡ ಕುಟುಂಬಗಳಿಂದ ಬಂದ ಈ ಹುಡುಗರು ಎಲ್ಲೆಲ್ಲೋ ಉಪಹಾರ ಸೇವಿಸಿಕೊಂಡು ರಸ್ತೆಯ ಇಕ್ಕೆಲಗಳಲ್ಲಿ , ಒಳರಸ್ತೆಗಳ ಡಾಂಬರು ನೆಲದ ಮೇಲೆ ಹಗಲಿರುಳು ಮಲಗುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ ಎಂದು ಜಿಲ್ಲಾ […]
ಪ್ರಧಾನಿ ಜತೆಗಿನ ‘ಪರೀಕ್ಷಾ ಪೇ ಚರ್ಚಾ’ ಸಂವಾದಕ್ಕೆ ಕುಂದಾಪುರದ ವಿದ್ಯಾರ್ಥಿನಿ ಆಯ್ಕೆ
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಕುಂದಾಪುರ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಅನುಷಾ ಅವರು ಆಯ್ಕೆಯಾಗಿದ್ದಾರೆ. ದೇಶದಲ್ಲಿ 1,500 ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮ ವೀಕ್ಷಿಸಲು ಆಯ್ಕೆಯಾಗಿದ್ದಾರೆ. ಇದರಲ್ಲಿ ಕೇವಲ 30 ವಿದ್ಯಾರ್ಥಿಗಳು ಮಾತ್ರ ಪ್ರಧಾನಿ ಜತೆಗೆ ಮಾತನಾಡಲಿದ್ದು, ಅದರಲ್ಲಿ ಅನುಷಾ ಕೂಡ ಅವಕಾಶ ಪಡೆದಿದ್ದಾಳೆ. ದೇಶದ ವಿವಿಧೆಡೆಯಿಂದ 10.39 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. […]
ಕೋಟ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೂರು ತಿಂಗಳ ಗರ್ಭಿಣಿ ದನ ಕಳವು
ಉಡುಪಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ತಿಂಗಳ ಗರ್ಭಿಣಿ ದನವನ್ನು ಗೋಕಳ್ಳರು ಕದ್ದೊಯ್ದ ಘಟನೆ ಕೋಟ ಸಮೀಪದ ಗುಳ್ಳಾಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಗುಳ್ಳಾಡಿ ಗ್ರಾಮದ ಮಂಜಿ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನದ ಹಗ್ಗವನ್ನು ಕತ್ತರಿಸಿಕೊಂಡು ಕಳವು ಮಾಡಲಾಗಿದೆ. ಮಂಜಿ ತೀರ ಬಡವರಾಗಿದ್ದು, ಸೊಸೆ ಹಾಗೂ ಮೊಮ್ಮಗಳೊಂದಿಗೆ ವಾಸವಿರುವ ಅವರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದರು. ಇದೀಗ ಇದ್ದ ಗೋವನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಈ ಬಗ್ಗೆ ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋ ಕಳ್ಳರ […]
ಅನ್ಯಕೋಮಿನ ಯುವಕರೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ಹಿಂದೂ ಯುವತಿಯ ರಕ್ಷಣೆ
ಬಂಟ್ವಾಳ: ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಹಿಂದೂ ಯುವತಿಯನ್ನು ಬಂಟ್ವಾಳ ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಅನ್ಯಕೋಮಿನ ಯುವಕರ ಜತೆ ಹಿಂದೂ ಯುವತಿ ಬಸ್ ನಲ್ಲಿ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಯಕರ್ತರು ಬಸ್ ಗೆ ದಿಢೀರ್ ದಾಳಿ ನಡೆಸಿ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರು ಹಾಗೂ ಯುವತಿಯ ಪರಿಚಯ ಲಭ್ಯವಾಗಿಲ್ಲ.