ಮಣಿಪಾಲ: ಯುವತಿ ನಾಪತ್ತೆ; ಇಬ್ಬರು ಯುವಕ ಬಂಧನ

ಮಣಿಪಾಲ: ಇಲ್ಲಿನ ಕೆಎಂಸಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಮನೆಕೆಲಸದ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಿಯಾಳಿಯ ಯುವಕರಿಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಜಾರ್ಖಾಂಡ್ ಮೂಲದ 21 ವರ್ಷದ ಯುವತಿ ಮಂಗಳವಾರ ರಾತ್ರಿಯಿಂದ ಕೆಎಂಸಿ ಕ್ವಾಟ್ರಸ್‌ನಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಪ್ರಾಧ್ಯಾಪಕಿ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ತನಿಖೆಗೆ ಇಳಿದ ಪೊಲೀಸರು ಸಿಸಿಟಿವಿ ಪರೀಶಿಲಿಸಿದಾಗ ಕೆಎಂಸಿ ಆಸ್ಪತ್ರೆಯ ಆವರಣದಲ್ಲಿರುವ ಲಾಂಡ್ರಿ ಮಾಲೀಕನ ಕಾರಿನಲ್ಲಿ ಅಂದು ರಾತ್ರಿ 11 ಗಂಟೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಇದರ ಆಧಾರದಲ್ಲಿ […]

ಕೋಟ: ದೇಗುಲದೊಳಗೆ ವ್ಯಕ್ತಿ ನೇಣಿಗೆ ಶರಣು

ಕೋಟ: ದೇಗುಲದ ಆವರಣದೊಳಗೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟತಟ್ಟು ಪಡುಕರೆಯ ಶಿರಸಿ ಮಾರಿಕಾಂಬ ಅಮ್ಮನವರ ದೇವಳದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಕೋಟತಟ್ಟು ಪಡುಕರೆ ನಿವಾಸಿ ಚೆನೈಯ್ಯ ಪೂಜಾರಿ (51) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಪಡುಕರೆಯ ಸಮುದ್ರ ಕಿನಾರೆಯಲ್ಲಿ ಬೀಡಾದಂಗಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಇಂದು ಮುಂಜಾನೆ ದೇವಳದ ಬಾವಿಯೊಳಗೆ ಬಾವಿಯ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ ಠಾಣಾ ವ್ಯಾಪ್ತಿಯಲ್ಲಿ […]

ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ: ಕೊಲೆಯ ಶಂಕೆ

ಉಳ್ಳಾಲ: ಇಲ್ಲಿನ ಕುಂಪಲ ಆಶ್ರಯಕಾಲನಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಶವ ಇಂದು ಪತ್ತೆಯಾಗಿದೆ. ಮೃತಳನ್ನು ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(20) ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ಈಕೆ, ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು. ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದ ವೇಳೆ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಧ್ಯಾಹ್ನ ತಾಯಿ ಮನೆಗೆ ಊಟಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸಿಎಂ ಬಳಿ ನಿಯೋಗ: ರಹೀಂ ಉಚ್ಚಿಲ್

ಉಡುಪಿ: ಬ್ಯಾರಿ ಸಮುದಾಯ ಏಳಿಗೆಯ ಉದ್ದೇಶದಿಂದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಎಲ್ಲರು ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ. ಸಮುದಾಯದ ಮುಖಂಡರ ನಿಯೋಗ ಮುಖ್ಯಮಂತ್ರಿ ಬಳಿ ತೆರಳಿ ಈ ಬೇಡಿಕೆಯನ್ನು ಸಲ್ಲಿಸಿ, ಪ್ರಾಧಿಕಾರ ಘೋಷಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪ್ರಾಧಿಕಾರನ್ನು ಬುಧವಾರ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾರಿ […]

ಬ್ಯಾರಿ ಭಾಷೆಯ ಶ್ರೀಮಂತಿಕೆ ಉಳಿವಿಗೆ ಲಿಪಿ ಅಗತ್ಯ: ರಹೀಂ ಉಚ್ಚಿಲ್

ಉಡುಪಿ: 1400 ವರ್ಷಗಳ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಗೆ ಲಿಪಿ ಇರಲಿಲ್ಲ. ಈವರೆಗೆ ನಾವು ಬರವಣಿಗೆಗೆ ಕನ್ನಡವನ್ನೇ ಅವಲಂಬಿಸಿಕೊಂಡು ಬಂದಿದ್ದೇವೆ. ಭಾಷೆಯ ಶ್ರೀಮಂತಿಕೆ ಉಳಿಸಲು, ಮುಂದಿನ ಜನಾಂಗ ಬ್ಯಾರಿ ಭಾಷೆಯನ್ನು ಕಲಿಯಲು ಅನುಕೂಲವಾಗುವಂತೆ ಲಿಪಿಯನ್ನು ಹುಟ್ಟುಹಾಕಲಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಉಡುಪಿ ಜಿಲ್ಲಾ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಬುಧವಾರ ಆಯೋಜಿಸಲಾದ ಪೆರ್ನಾಲ್ […]