ಅಲೆವೂರು: ಎಂಟು ತಿಂಗಳ ಬಳಿಕ ಮೃತ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಉಡುಪಿ: ಇಲ್ಲಿನ ಅಲೆವೂರು ಜೋಡು ರಸ್ತೆಯ ಯೂನಿಯನ್ ಬ್ಯಾಂಕ್ (ಹಳೆಯ ಕಾರ್ಪೋರೇಷನ್ ಬ್ಯಾಂಕ್) ಬಳಿಯ ಮನೆಯೊಂದರಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸುರೇಶ್ ಶೆಟ್ಟಿ (47) ಎಂದು ಗುರುತಿಸಲಾಗಿದೆ. ಇವರು ಮೃತಪಟ್ಟು ಸುಮಾರು ಎಂಟು ತಿಂಗಳು ಕಳೆದಿರಬಹುದೆಂದು ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಮಣಿಪಾಲದ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ […]

ಉಡುಪಿ: ನಾಗರಿಕ ಸಮಿತಿ ಕಾರ್ಯಕರ್ತರ ಸಮಯಪ್ರಜ್ಞೆಯಿಂದ ಬದುಕುಳಿದ ಬಿಳಿ ಗೂಬೆ

ಉಡುಪಿ: ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಅವನತಿಯ ಅಂಚಿನಲ್ಲಿರುವ ಬಿಳಿ ಪ್ರಬೇಧದ ಗೂಬೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಅರಣ್ಯವಿಕ್ಷಕ ಪರಶುರಾಮ ಮೇಟಿ ಅವರ ವಶಕ್ಕೆ ನೀಡಿದ್ದಾರೆ. ಗೂಬೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಸುರಕ್ಷಿತ ಅರಣ್ಯಪ್ರದೇಶಕ್ಕೆ ಬಿಡುವುದಾಗಿ ಉಪವಲಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಬಿಳಿ ಗೂಬೆಯು ಅಂಬಲಪಾಡಿ ಸಿಡ್ನಿ ಮೆಂಡೊನ್ಸಾ ಅವರ ಮನೆಯಲ್ಲಿ ಪತ್ತೆಯಾಗಿತ್ತು. ನಾಯಿ- ಬೆಕ್ಕುಗಳಿಗೆ […]

ಕುಂದಾಪುರ: ಜಪ್ತಿ ಗ್ರಾಮದ ನಿವಾಸಿ ನೇಣಿಗೆ ಶರಣು

ಕುಂದಾಪುರ: ಪಾಳು ಬಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಪ್ತಿ ಗ್ರಾಮದ ಜನತಾ ಕಾಲೋನಿ ಎಂಬಲ್ಲಿ ನಡೆದಿದೆ. ಜಪ್ತಿ ಗ್ರಾಮದ ಕೆರೆ ಜೆಡ್ಡು ನಿವಾಸಿ ಮಂಜುನಾಥ ಮಡಿವಾಳ (42) ಆತ್ಮಹತ್ಯೆ ಶರಣಾದ ವ್ಯಕ್ತಿ. ಇವರು ಮಾ. 3ರಂದು ಪಾಳುಬಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ನಿವೃತ್ತ ಇಸ್ರೋ ವಿಜ್ಞಾನಿ ನದಿಯಲ್ಲಿ ಮುಳುಗಿ ಮೃತ್ಯು

ಕಾರ್ಕಳ: ಬೆಂಗಳೂರು ಬಸವನಗುಡಿ ನಿವಾಸಿ ನಿವೃತ್ತ ಇಸ್ರೋ ವಿಜ್ಞಾನಿ ರತ್ನಾಕರ ಎಸ್.ಸಿ (63) ಅವರು ಸ್ವರ್ಣ ನದಿಗೆ ಸ್ನಾನಕ್ಕೆ ಹೋದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ರತ್ನಾಕರ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಗೋವಿಂದೂರು ಎಂಬಲ್ಲಿರುವ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಾಸ್ತವ್ಯ ಇದ್ದರು. ಮಾರ್ಚ್ 3ರಂದು ಬೆಳಿಗ್ಗೆ 10.40ಕ್ಕೆ ಆಶ್ರಮದ ಬಳಿ ಇರುವ ಸ್ವರ್ಣ ನದಿಗೆ ಸ್ನಾನಕ್ಕೆ ಹೋದವರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು. ಅವರ ಮೃತ ದೇಹ ಅಂದು ಸಂಜೆ 4 ಗಂಟೆಗೆ ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ […]

ತಮಿಳುನಾಡು: ಚುನಾವಣೆಗೆ ಮೊದಲೇ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಮೊದಲೇ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ನಾನು ಯಾವತ್ತೂ ಯಾವುದೇ ಹುದ್ದೆಯನ್ನು ಬಯಸಿಲ್ಲ. ತಮಿಳುನಾಡಿನ ಜನರಿಗೆ ನಾನು ಕೃತಜ್ಞಳಾಗಿದ್ದೇನೆ. ರಾಜಕೀಯದಿಂದ ದೂರ ಸರಿಯುತ್ತೇನೆ. ಅಮ್ಮನ ಸರ್ಕಾರವನ್ನು ತಮಿಳುನಾಡಿನಲ್ಲಿ ಸ್ಥಾಪಿಸಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಹೇಳುವ ಮೂಲಕ ಶಶಿಕಲಾ ರಾಜಕೀಯದಿಂದ ದೂರ ಸರಿದಿದ್ದಾರೆ. ಅಣ್ಣಾಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಚಾಟಿಸಿರುವ ಪಳನಿಸ್ವಾಮಿ, ಪಕ್ಷದ ಬಾಗಿಲು ಮುಚ್ಚಿದ್ದರು. ಹೀಗಾಗಿ, ಬೇರೆ ದಾರಿ ಕಾಣದೆ ಶಶಿಕಲಾ ರಾಜಕೀಯ ಸನ್ಯಾಸದ ನಿರ್ಧಾರ […]