ವಾಟ್ಸಾಪ್ ಗ್ರೂಪ್ ಮೂಲಕ ಸಮಾಜಸೇವೆ; ‘ವಾಯ್ಸ್ ಆಫ್ ಇಂಡಿಯಾ’ ಬಳಗದಿಂದ ಮಾದರಿ ಕೆಲಸ
ಉಡುಪಿ: ಸದಾ, ಇನ್ನೊಬ್ಬರ ತೇಜೋವಧೆ, ಅಪರಾಧ ಕೃತ್ಯ, ಹರಟೆ ಹೊಡೆಯುವುದು ವಿಡಿಯೋ ಫೋಟೋ ಶೇರ್ ಮಾಡುವುದು ದೇಶದ್ರೋಹಿ ಹೇಳಿಕೆಗಳಿಗೆ ಗೋಸ್ಕರವೇ ಜಾಲತಾಣಗಳನ್ನು ಬಳಸುವ ಜನರ ಮಧ್ಯೆ ಇಲ್ಲೊಂದು ವಾಟ್ಸಪ್ ಗ್ರೂಪ್ ಸಂಘಟನೆ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದೆ. ಈವರೆಗೆ ಸುಮಾರು ₹55 ಸಾವಿರ ಹಣ ಸಂಗ್ರಹಿಸಿ ಬಡವರಿಗೆ, ಅನಾರೋಗ್ಯ ಪೀಡಿತರಿಗೆ, ಸಂಕಷ್ಟದಲ್ಲಿ ಇರುವವರಿಗೆ ಹಸ್ತಾಂತರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಸಾಮಾಜಿಕ ಜಾಲತಾಣವನ್ನು ಕೇವಲ ಮನೋರಂಜನೆಗೆ ಬಳಸುವ ಜನರ ಮಧ್ಯೆ ವಾಯ್ಸ್ ಆಫ್ ಇಂಡಿಯಾ ವಾಟ್ಸಪ್ ಗ್ರೂಪ್ ನ […]
ಉಡುಪಿ: ಪ್ರವಾಸಕ್ಕೆ ಬಂದಿದ್ದ ವ್ಯಕ್ತಿ ಮೃತ್ಯು
ಉಡುಪಿ: ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ವಾಹನದಲ್ಲೇ ಮೃತಪಟ್ಟ ಘಟನೆ ಹಿರಿಯಡಕ ಸಮೀಪ ನಡೆದಿದೆ. ಮೃತರನ್ನು ಚಿತ್ರದುರ್ಗ ಆಲಗಟ್ಟಿ ನಿವಾಸಿ ಚೆನ್ನಬಸಪ್ಪ ಎಂಬವರ ಮಗ ಟಿ.ಸಿ.ಶಿವಕುಮಾರ್ (39) ಎಂದು ಗುರುತಿಸಲಾಗಿದೆ. ಇವರು ಫೆ.28ರಂದು ರಾತ್ರಿ ಸಂಬಂಧಿಕರೊಂದಿಗೆ ವಾಹನದಲ್ಲಿ ಸಿಂಗದೂರು, ಧರ್ಮಸ್ಥಳ, ಉಡುಪಿ ಕಡೆಗೆ ಪ್ರವಾಸ ಹೊರಟಿದ್ದರು. ಮಾ. 1ರಂದು ಹಿರಿಯಡಕ ಬಳಿ ಪೆಟ್ರೋಲ್ ಬಂಕ್ ಬಳಿ ಎಲ್ಲರು ತಿಂಡಿ ತಿನ್ನಲು ವಾಹನದಿಂದ ಇಳಿದಿದ್ದು, ಶಿವಕುಮಾರ್ ಒಬ್ಬರೇ ವಾಹನದಲ್ಲಿ ಮಲಗಿದ್ದರು. ಬಳಿಕ ಅವರು ಅಸ್ವಸ್ಥಗೊಂಡು ಸೀಟಿನಿಂದ ಬಿದ್ದಿದ್ದು, […]
ಹೂಳೆತ್ತಲು ಬಾವಿಗಿಳಿದ ಇಬ್ಬರು ಕಾರ್ಮಿಕರ ಜೀವ ಉಳಿಸಿದ ಹಿಂ.ಜಾ.ವೇ ಕಾರ್ಯಕರ್ತ ಸುಜಿತ್ ನಾಯಕ್
ಕಾರ್ಕಳ: ಇಲ್ಲಿನ ಬೈಲೂರು ಎಂಬಲ್ಲಿ ಬಾವಿಯ ಹೂಳು ತೆಗೆಯಲು ಹೋಗಿ ಉಸಿರುಗಟ್ಟಿ ಬಾವಿಯೊಳಗೆ ಅಸ್ವಸ್ಥಗೊಂಡಿದ್ದ ಮೂವರು ಕೂಲಿ ಕಾರ್ಮಿಕರನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಸುಜಿತ್ ನಾಯಕ್ ನೀರೆ ಅವರು ಮೇಲೆತ್ತುವ ಮೂಲಕ ಇಬ್ಬರ ಜೀವ ಉಳಿಸಿ ಸಾಹಸ ಮೆರೆದಿದ್ದಾರೆ. ದುರಾದೃಷ್ಟವಶಾತ್ ಓರ್ವ ಕೂಲಿಕಾರ್ಮಿಕನ ಪ್ರಾಣಪಕ್ಷಿ ಅಷ್ಟೊತ್ತಿಗೆ ಹಾರಿಹೋಗಿತ್ತು. ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಮಣಿ (24) ಎಂಬವರು ಅದಾಗಲೇ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅಸ್ವಸ್ಥಗೊಂಡ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. […]
ರಾಜ್ಯ ಸರ್ಕಾರದ ಪ್ರಭಾವಿ ಸಚಿವನ ರಾಸಲೀಲೆ ವಿಡಿಯೋ ಸಿಡಿ ಬಹಿರಂಗ
ಬೆಂಗಳೂರು: ಬಿಜೆಪಿ ಪ್ರಭಾವಿ ಮುಖಂಡ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳೆ ಅವರದ್ದು ಎನ್ನಲಾದ ರಸಲೀಲೆಯ ವೀಡಿಯೋ ಸಿಡಿ ಖಾಸಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ವಿಡಿಯೋ ಸಿಡಿಯನ್ನು ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಎಂಬವರು ಬೆಂಗಳೂರು ಪೊಲೀಸ್ ವರಿಷ್ಠರಿಗೆ ಹಸ್ತಾಂತರಿಸಿದ್ದಾರೆ. ಈಗಾಗಲೇ ಈ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಕೆಲಸ ಕೇಳಿಕೊಂಡು ಬಂದಿದ್ದ ಯುವತಿಯನ್ನು ರಮೇಶ್ ಜಾರಕಿಹೊಳಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಮರ್ಪಕ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ […]
ಕಾರ್ಕಳ: ಹೂಳು ತೆಗೆಯಲು ಬಾವಿಗಿಳಿದ ಕಾರ್ಮಿಕ ಉಸಿರುಗಟ್ಟಿ ಮೃತ್ಯು; ಇಬ್ಬರು ಅಸ್ವಸ್ಥ
ಕಾರ್ಕಳ: ಹೂಳು ತೆಗೆಯಲು ಬಾವಿಗಿಳಿದ ಮೂವರು ಕಾರ್ಮಿಕರ ಪೈಕಿ ಓರ್ವ ಉಸಿರುಗಟ್ಟಿ ಮೃತಪಟ್ಟಿದ್ದು, ಇನ್ನಿಬ್ಬರು ಅಸ್ವಸ್ಥಗೊಂಡ ಘಟನೆ ಕಾರ್ಕಳ ತಾಲೂಕಿನ ಬೈಲೂರು ಬಳಿ ನಡೆದಿದೆ. ಮೃತನನ್ನು ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಮಣಿ (24) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.