ಸತತ 9ನೇ ದಿನವೂ ತೈಲ ದರ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ದರ ಹೀಗಿದೆ?
ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಗಳು ಸತತ 9ನೇ ದಿನವೂ ಏರಿಕೆ ಕಂಡಿದ್ದು, ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಶತಕದ ಗಡಿ ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಮತ್ತೆ ಲೀಟರ್ ಗೆ 25 ಪೈಸೆ ಹೆಚ್ಚಳವಾಗಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 100.13 ರೂಪಾಯಿ ಆಗಿದೆ. ಇದು ದೇಶದಲ್ಲಿಯೇ ಅತಿ ಹೆಚ್ಚು ದುಬಾರಿಯಾಗಿದೆ. ಕಳೆದ ಎಂಟು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ […]
ನಕಲಿ ಆಯುರ್ವೇದ ಔಷಧ ಮಾರಾಟ: ಆರು ಮಂದಿಯ ಬಂಧನ
ಬೆಂಗಳೂರು: ನಕಲಿ ಆಯುರ್ವೇದ ಔಷಧ ಮಾರಾಟ ಮಾಡುತ್ತಿದ್ದ ಆರು ಜನರ ತಂಡವನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಸಂಜಿತ್, ಮಂಜುನಾಥ್, ಶಿವಲಿಂಗ, ರಮಾಕಾಂತ್, ಕಿಶನ್, ಕಲ್ಲೋಳಪ್ಪ ಬಂಧಿತ ಆರೋಪಿಗಳು. ಇವರಿಂದ ನಕಲಿ ಆಯುರ್ವೇಧಿಕ್ ಔಷಧಿ ಸೇರಿ 5 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ವಯೋ ಸಹಜ ಕಾಯಿಲೆಗಳಿಗೆ ಔಷಧ ಕೊಡುವ ಸೋಗಿನಲ್ಲಿ ಹಿರಿಯ ನಾಗರಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಕಾಯಿಲೆ ವಾಸಿ ಮಾಡುವುದಾಗಿ ವೃದ್ಧರನ್ನು ನಂಬಿಸುತ್ತಿದ್ದರು. ಅಲ್ಲದೇ, ವಾಸಿಯಾಗದಿದ್ದಲ್ಲಿ ಹಣ ವಾಪಸ್ಸು […]
ಉಡುಪಿ ಯಕ್ಷಗಾನ ಕೇಂದ್ರ: ಫೆ. 20ರಿಂದ ಉಚಿತ ಯಕ್ಷಗಾನ ಕಮ್ಮಟ
ಉಡುಪಿ: ಶಿವಪ್ರಭಾ ಯಕ್ಷಗಾನ ಕೇಂದ್ರ ಇಂದ್ರಾಳಿ-ಉಡುಪಿ ಸಂಸ್ಥೆಯು 50 ಸಾರ್ಥಕ ವರ್ಷಗಳನ್ನು ಪೂರೈಸಿದೆ. ಈ ಸುಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರು ಮತ್ತು ರಂಗಕರ್ಮಿಗಳಿಗೆ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ನೇತೃತ್ವದಲ್ಲಿ ಉಚಿತ ಯಕ್ಷಗಾನ ಕಮ್ಮಟವನ್ನು ಆಯೋಜಿಸಲು ಸಂಸ್ಥೆ ತೀರ್ಮಾನಿಸಿದೆ. ಉಡುಪಿ ಯಕ್ಷಗಾನ ಕೇಂದ್ರ ಉಚಿತ ಶಿಬಿರವನ್ನು ಕೈಗೊಳ್ಳುತ್ತದೆ ಎಂಬ ಮಾಹಿತಿ ಪಡೆದ ದೇಶದ ವಿವಿಧ ರಾಜ್ಯಗಳ ರಂಗಕರ್ಮಿಗಳು 300 ಕ್ಕೂ ಹೆಚ್ಚು ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ಪೈಕಿ ಡೆಲ್ಲಿ, ಮಹಾರಾಷ್ಟ್ರ, ಜೈಪುರ, ಉತ್ತರಪ್ರದೇಶ […]
ಕಾರ್ಕಳ: ವಿಷ ಸೇವಿಸಿ ಬೆಳ್ಮಣ್ ನಿವಾಸಿ ಆತ್ಮಹತ್ಯೆ
ಕಾರ್ಕಳ: ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದಲ್ಲಿ ನಡೆದಿದೆ. ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಪುನಾರು ಮನೆಯ ನಿವಾಸಿ ಮೈಕಲ್ ಹೆನ್ರಿ ಫೆರ್ನಾಂಡೀಸ್ (50) ಮೃತ ದುರ್ದೈವಿ. ಇವರು ಮನೆಯಲ್ಲಿ ಒಬ್ಬರೇ ಇದ್ದು, ಹೆಂಡತಿ ಮತ್ತು ಮಗಳು ವಿದೇಶದಲ್ಲಿ ನೆಲೆಸಿದ್ದಾರೆ. ಮೈಕಲ್ ವಿಪರೀತ ಮದ್ಯಪಾನ ಸೇವಿಸುವ ಚಟ ಹೊಂದಿದ್ದು, ಇದೇ ಕಾರಣದಿಂದ ಮನನೊಂದು ಫೆ.15ರ ರಾತ್ರಿ 11 ಗಂಟೆಯಿಂದ 16ರ ಬೆಳಿಗ್ಗೆ 12 ಗಂಟೆಯ ಮಧ್ಯಾವಧಿಯಲ್ಲಿ ವಿಷ ಸೇವಿಸಿ ಆತ್ಯಹತ್ಯೆ […]
ಫೆ. 20- 21: ಕಿದಿಯೂರು-ಕಡೆಕಾರು ಶ್ರೀ ಬ್ರಹ್ಮಲಿಂಗೇಶ್ವರ, ನಾಗ ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ
ಉಡುಪಿ: ಕಿದಿಯೂರು-ಕಡೆಕಾರು ಶ್ರೀ ಬ್ರಹ್ಮಲಿಂಗೇಶ್ವರ, ನಾಗ ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಬ್ರಹ್ಮದರ್ಶನ, ಆಶ್ಲೇಷಬಲಿ, ಮಹಾಅನ್ನಸಂತರ್ಪಣೆ ಮತ್ತು ನಾಗ ತನು-ತರ್ಪಣೆ ಸೇವೆ ಫೆ. 20 ಮತ್ತು 21ರಂದು ದೇಗುಲದ ಸನ್ನಿಧಿಯಲ್ಲಿ ನೆರವೇರಲಿದೆ ಎಂದು ದೇಗುಲದ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ ಹೇಳಿದರು. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 20ರಂದು ಸಂಜೆ 5ರಿಂದ ಪುಣ್ಯಾಹ, ಪಂಚಗವ್ಯ, ಸಪ್ತಶುದ್ಧಿ, ಭೂಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು […]