ನಿಟ್ಟೆ ಡಾ. ಎನ್ಎಸ್ಎಎಂ ಪ್ರಥಮದರ್ಜೆ ಕಾಲೇಜಿನ ಎನ್ ಎಸ್ಎಸ್ ಚಟುವಟಿಕೆಗಳ ಉದ್ಘಾಟನೆ
ಕಾರ್ಕಳ: ನಿಟ್ಟೆ ಡಾ. ಎನ್. ಎಸ್. ಎ. ಎಮ್ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 2020-21ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗಣಪತಿ ಆಚಾರ್ಯ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಕುಮಾರಿ ಬಿ. ಕೆ ಅಧ್ಯಕ್ಷತೆ ವಹಿಸಿದ್ದರು. ರಾಷ್ತ್ರೀಯ ಸೇವಾ ಯೋಜನಾಧಿಕಾರಿ ಭರತ್ ಎಸ್ ಭಟ್ ಸ್ವಾಗತಿಸಿದರು. ಅನುಷಾ ಆಚಾರ್ಯ ವಂದಿಸಿದರು. ಕಾಲೇಜಿನ ಉಪನ್ಯಾಸಕ ಸಚಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ: ನಾಗರಾಜನ ಸಂಚಾರಕ್ಕೆ ಝಿರೋ ಟ್ರಾಫಿಕ್.!
ಉಡುಪಿ: ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಇಂದು ನಾಗರಹಾವೊಂದು ಪ್ರತ್ಯಕ್ಷಗೊಂಡಿದ್ದು, ಟ್ರಾಫಿಕ್ ಪೊಲೀಸರು ವಾಹನಗಳನ್ನು ನಿಲ್ಲಿಸಿ ನಾಗರಾಜನಿಗೆ ರಸ್ತೆ ದಾಟಲು ಅನುಕೂಲ ಮಾಡಿಕೊಟ್ಟರು. ಸದಾ ವಾಹನ ಸಂಚಾರದ ದಟ್ಟಣೆಯಿಂದ ಕೂಡಿರುವ ಕಲ್ಸಂಕ ಜಂಕ್ಷನ್‌ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ಹಾಗೂ ಟ್ರಾಫಿಕ್ ಪೊಲೀಸರು ಕೆಲಕಾಲ ತಬ್ಬಿಬ್ಬಾದರು. ನಾಗರಹಾವು ಗುಂಡಿಬೈಲು ಕಡೆಯಿಂದ ಕೃಷ್ಣ ಮಠಕ್ಕೆ ಹೋಗುವ ರಸ್ತೆಯ ಕಡೆಗೆ ಸಂಚರಿಸುತ್ತಿದ್ದು, ವಾಹನಗಳ ದಟ್ಟಣೆಯಿಂದ ಹಾವು ಕೂಡ ಕೆಲ ಕ್ಷಣ ಗಲಿಬಿಲಿಗೊಂಡಿತು. ಇದನ್ನು ಗಮನಿಸಿದ ಸಂಚಾರ ಪೊಲೀಸ್ ಸಿಬ್ಬಂದಿ 4 […]
ಜ್ಞಾನದೀವಿಗೆ ಯೋಜನೆಯಡಿ ಉಡುಪಿಯಲ್ಲಿ ಮಲಬಾರ್ ಗೋಲ್ಡ್ ನಿಂದ 100 ಟ್ಯಾಬ್ ವಿತರಣೆ
ಉಡುಪಿ: ಪಬ್ಲಿಕ್ ಟಿವಿ ಸುದ್ದಿವಾಹಿನಿ ಮತ್ತು ರೋಟರಿ ಇಂಟರ್ನ್ಯಾಷನಲ್ ಸಹಯೋಗದ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣಾ ಅಭಿಯಾನಕ್ಕೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆ ಕೈಜೋಡಿಸಿದೆ. ಉಡುಪಿ ಜಿಲ್ಲೆಯ ಎರಡು ಸರಕಾರಿ ಶಾಲೆಗಳಿಗೆ 100 ಟ್ಯಾಬ್ ಗಳನ್ನು ವಿತರಣೆ ಮಾಡಿದೆ. ಸರಕಾರಿ ಪ್ರೌಢಶಾಲೆ ಸಿದ್ದಾಪುರದ 100 ಮಕ್ಕಳಿಗೆ, ಸರಕಾರಿ ಪ್ರೌಢಶಾಲೆ ಹೆಬ್ರಿಯ 100 ಮಕ್ಕಳಿಗೆ ಉಪಯೋಗವಾಗುವ ಟ್ಯಾಬ್ ಗಳನ್ನು ಮಲಬಾರ್ ಗೋಲ್ಡ್ ಸಂಸ್ಥೆ ನೀಡಿದೆ. 3,45,000 ರೂಪಾಯಿ ಮೊತ್ತದ ಟ್ಯಾಬ್ ಗಳನ್ನು ಸರಕಾರಿ ಶಾಲೆಯ ಮಕ್ಕಳಿಗೆ […]
ಉಡುಪಿ: ಪತ್ನಿ-ಅತ್ತೆ ಕೊಲೆ ಪ್ರಕರಣ; ಪತಿ ದೋಷಿ
ಉಡುಪಿ: ಕಳೆದ ಆರು ವರ್ಷಗಳ ಹಿಂದೆ ಉಡುಪಿಯ ಜನತೆಯನ್ನು ಬೆಚ್ಚಿ ಬೀಳಿಸಿದ ನಗರದ ಚಿಟ್ಪಾಡಿ ಎಂಬಲ್ಲಿ ನಡೆದ ಪತ್ನಿ ಹಾಗೂ ಅತ್ತೆಯ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಆರೋಪಿ ಪತಿ ಸಂಜಯ ಕುಮಾರ್ ದತ್ತ ದೋಷಿಯೆಂದು ಬುಧವಾರ ಆದೇಶ ನೀಡಿದ್ದು, ಶಿಕ್ಷೆ ಪ್ರಮಾಣವನ್ನು ಫೆ. 15ರಂದು ಪ್ರಕಟಿಸಲಿದೆ. ಉಡುಪಿ ಚಿಟ್ಪಾಡಿಯಲ್ಲಿ ನೆಲೆಸಿದ್ದ ಅಸ್ಸಾಂ ಮೂಲದ ಸಂಜಯಕುಮಾರ್ ದತ್ತ ಆರೋಪ ಸಾಬೀತಾಗಿದೆ. ಘಟನೆ ವಿವರ: ಮೂಲತಃ ಅಸ್ಸಾಂ ನಿವಾಸಿಯಾಗಿದ್ದ ಸಂಜಯಕುಮಾರ್, ಕಳೆದ […]
ಮಣಿಪಾಲದಲ್ಲಿ ಬೆಂಕಿ ಅವಘಡ: ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಮಣಿಪಾಲ: ಮಣಿಪಾಲ ಟೈಗರ್ ಸರ್ಕಲ್ ಬಳಿಯ ಡ್ರಗ್ ಹೌಸ್ ಮೆಡಿಕಲ್ ಶಾಪ್ ಮುಂಭಾಗದಲ್ಲಿರುವ ಬೃಹತ್ತಾದ ಮಾವಿನ ಮರಕ್ಕೆ ಇಂದು ಮಧ್ಯಾಹ್ನದ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ್ದು, ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿ ಶಾಮಕದಳವರು ಧಾವಿಸಿ ಬೆಂಕಿ ನಂದಿಸಿದ ಪರಿಣಾಮ ಯಾವುದೇ ಅನಾಹುತ ಆಗಿಲ್ಲ. ವಿದ್ಯುತ್ ತಂತಿಗಳು ಮರಕ್ಕೆ ತಾಗಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಮರಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಮರದ ಸಮೀಪದಲ್ಲೇ […]