ಕೊಡವೂರು ಶಂಕರನಾರಾಯಣ ದೇಗುಲ: ರಾಶಿಪೂಜಾ ಮಹೋತ್ಸವ ಸಂಪನ್ನ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದ ವಾರ್ಷಿಕ ರಾಶಿಪೂಜಾ ಮಹೋತ್ಸವವು ಗುರುವಾರ ವಿಜೃಂಭಣೆಯಿಂದ ನೆರವೇರಿತು. ದೇಗುಲದ ತಂತ್ರಿ ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳು ಹಾಗೂ ತಂಡದವರ ನೇತೃತ್ವದಲ್ಲಿ ಗುರುವಾರ ಸುರ್ಯೋದಯದಿಂದ ಶುಕ್ರವಾರ ಬೆಳಿಗ್ಗೆ ಸುರ್ಯೋದಯವರೆಗೆ 24 ಗಂಟೆ ಜರಗಿತು. ರಾಶಿಪೂಜಾ ಮಹೋತ್ಸವವು ವಾದ್ಯ, ಸಂಗೀತ, ಭರತನಾಟ್ಯ, ಯಕ್ಷಗಾನ, ಭಜನೆ, ಕೀರ್ತನೆ ಅಷ್ಟಾವಧಾನ ಪೂಜೆಯೊಂದಿಗೆ ಸಂಪನ್ನಗೊಂಡಿತು. ಆರೂರು ಶ್ರೀ ವಿಷ್ಣುಮೂರ್ತಿ ತಂಡದಿಂದ ನಾಮ ಸಂಕೀರ್ತನೆ ನಡೆಯಿತು. 12 ಹರಿವಾಣದಲ್ಲಿ 12 ರಾಶಿಗಳ ಉಬ್ಬು ಚಿತ್ರ ರಚಿಸಿ ಶಂಕರನಾರಾಯಣ ದೇವರನ್ನು ಅಲಂಕರಿಸಲಾಗಿತ್ತು. […]

ಮಣಿಪಾಲ: ಆಟೊದಲ್ಲಿ ಗಾಂಜಾ ಮಾರಾಟ; ಮೂವರ ಬಂಧನ

ಉಡುಪಿ: ಆಟೋ ರಿಕ್ಷಾದಲ್ಲಿ‌ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಉಡುಪಿ ಪೊಲೀಸರು ಇಂದು ಶೀಂಬ್ರಾ ಸೇತುವೆ ಬಳಿ ಬಂಧಿಸಿದ್ದು, ಬಂಧಿತರಿಂದ ₹ 2,66,000 ಮೌಲ್ಯದ  ಸುಮಾರು 8 ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ  ಗೌತಮ್‌‌ ರಾಜು ಶಿಮುಂಗೆ, ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ ಹಾಗೂ ಬ್ರಹ್ಮಾವರ  ಕೊಳಲ ಗಿರಿಯ ಕೃಷ್ಣ ಜಲಗಾರ್ ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ […]