ವಿಶ್ವೇಶತೀರ್ಥ ಶ್ರೀಗಳು , ಬನ್ನಂಜೆಯವರು ಆಧ್ಯಾತ್ಮದ ಹೆದ್ದಾರಿ ನಿರ್ಮಿಸಿದ ಮಹಾನುಭಾವರು: ಬಾಳೆಗಾರು ಶ್ರೀ

ಉಡುಪಿ: ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಅಂಬಲಪಾಡಿಯ ಮನೆ ಈಶಾವಾಸ್ಯಮ್ ನಲ್ಲಿ ಆಚಾರ್ಯರ 45ನೇ ದಿನದ ಪುಣ್ಯತಿಥಿ ಹಾಗೂ ಸೌರ ಮಧ್ವ ನವಮಿ ಪ್ರಯುಕ್ತ ಶ್ರೀ ಬಾಳೆಗಾರು ಮಠದ ಶ್ರೀ ರಘುಭೂಷಣ ತೀರ್ಥ ಶ್ರೀಪಾದರು ತಮ್ಮ ಪಟ್ಟದ ದೇವರಾದ ಶ್ರೀ ಸೀತಾರಾಮ- ಶ್ರೀ ಯೋಗಾನೃಸಿಂಹ ದೇವರ ಪೂಜೆ ನೆರವೇರಿಸಿ ಭಿಕ್ಷೆ ,ಮಾಲಿಕೆ ಮಂಗಲಾರತಿ ಸ್ವೀಕರಿಸಿದರು. ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು, ಎರಡು ಡಿಸೆಂಬರ್ ಗಳ ಅವಧಿಯಲ್ಲಿ ಶ್ರೀ ವಿಶ್ವೇಶತೀರ್ಥರು ಮತ್ತು ಬನ್ನಂಜೆ ಗೋವಿಂದಾಚಾರ್ಯರು ಹೀಗೆ ಇಬ್ಬರು […]

ಉಡುಪಿ ಬಿಗ್ ಬಜಾರ್ ನಲ್ಲಿ ‘ಅಭಾರ್ ಡೇ’ ಕಾರ್ಯಕ್ರಮ: ಲಾಕ್ ಡೌನ್ ನಲ್ಲಿ ಸಹಕರಿಸಿದ ಗ್ರಾಹಕರಿಗೆ ಅಭಿನಂದನೆ

ಉಡುಪಿ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಹಕರಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಇಂದು ಉಡುಪಿ ಬಿಗ್ ಬಜಾರ್ ಮಳಿಗೆಯಲ್ಲಿ ‘ಅಭಾರ್ ಡೇ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಡುಪಿ ಬಿಗ್ ಬಜಾರ್ ಮುಖ್ಯಸ್ಥ ರಾಘವೇಂದ್ರ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರು ಸಂಸ್ಥೆಗೆ ಉತ್ತಮ ರೀತಿಯಲ್ಲಿ ಸಹಕರಿಸಿದ್ದು, ಇದಕ್ಕೆ ಸಂಸ್ಥೆ ಅಭಾರಿಯಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕ್ಯೂನಲ್ಲಿ ನಿಂತುಕೊಂಡು ಅಗತ್ಯವಸ್ತುಗಳ ಖರೀದಿಸಿದ್ದಾರೆ. ಸೋಂಕು ಹರಡುವ ಭೀತಿಯ ಮಧ್ಯೆಯೂ ಸಂಸ್ಥೆಯ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಅಗತ್ಯವಸ್ತುಗಳನ್ನು ಗ್ರಾಹಕರು ಖರೀದಿಸಿದ್ದಾರೆ. […]

ಜ.25-ಫೆ. 5: ಕೊಡವೂರು ಮಹಾರಥೋತ್ಸವ, ರಾಶಿ ಪೂಜಾ ಸಂಭ್ರಮ

ಉಡುಪಿ: ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 25 ರಿಂದ ಫೆಬ್ರವರಿ 5ರ ವರೆಗೆ ಶ್ರೀ ದೇವಳದ ಮಹಾರಥೋತ್ಸವ ಹಾಗೂ ರಾಶಿ ಪೂಜೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಪನ್ನಗೊಳ್ಳಲಿವೆ. ಧಾರ್ಮಿಕ ಕಾರ್ಯಕ್ರಮಗಳು: ಜ. 25 ರಂದು ದೇವಳದ ವಾರ್ಷಿಕ ಮಹೋತ್ಸವದ ಸಪ್ತೋತ್ಸವ ಪ್ರಾರಂಭ, ಸಂಜೆ 4.30ಕ್ಕೆ ಸಾಮೂಹಿಕ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ. ಜ. 26ರಂದು ಬೆಳಿಗ್ಗೆ 8ಕ್ಕೆ ಗಣಯಾಗ, ಸಂಜೀವಿನಿ ಮೃತ್ಯುಂಜಯ ಯಾಗ. ಜ.27 ಬೆಳಿಗ್ಗೆ […]

ಕಾರ್ಕಳ: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಆರೋಪಿಯ ಬಂಧನ

ಕಾರ್ಕಳ: ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದುಕೊಂಡು ಹೋಗಿ ಮನೆಯೊಂದರಲ್ಲಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿಯ ಪ್ರಾಣೇಶ್(38) ಎಂಬಾತ ಬಂಧಿತ ಆರೋಪಿ‌. ಈತ ಆಕೆಯನ್ನು ಕಾಲೇಜಿಗೆ ಬಿಡುವ ನೆಪದಲ್ಲಿ ಉಪ್ಪಿನಂಗಡಿಯ ಮನೆಯೊಂದಕ್ಕೆ ಕರೆದುಕೊಂಡು ಅತ್ಯಾಚಾರ ನಡೆಸಿದ್ದನು. ಬಳಿಕ ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದನು. ಈ ಬಗ್ಗೆ ವಿಷಯ ಬಾಯಿಬಿಟ್ಟರೆ ನಿನ್ನನ್ನು ಕೊಲ್ಲುತ್ತೇನೆ ಹಾಗೂ ವಿಡಿಯೋ ಹಾಕಿ ಮಾನ ಹರಾಜು ಹಾಕುತ್ತೇನೆಂದು ಬೆದರಿಕೆಯೊಡ್ಡಿದ್ದನು.‌ ಇದರಿಂದ ಹೆದರಿದ ಯುವತಿ ಆತನ […]

ಮಂಗಳೂರು: ಗಾಂಜಾ ಮಾರುತ್ತಿದ್ದ ಏಳು ಮಂದಿಯ ಬಂಧನ; 44 ಕೆ.ಜಿ. ಗಾಂಜಾ ವಶ

ಮಂಗಳೂರು: ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ತಂಡವೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 44 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನರಿಂಗಾನದ ತೌಡುಗೋಳಿ ಕ್ರಾಸ್ ನಿವಾಸಿ ಅಬ್ದುಲ್ ಅಝೀಝ್ ಯಾನೆ ಪೋಕರ್ ಅಝೀಝ್, ಹಫೀಝ್ ಯಾನೆ ಅಪ್ಪಿ ಯಾನೆ ಮೊಯ್ದೀನ್, ತೆಲಂಗಾಣದ ವಿಠಲ್ ಚೌವ್ಹಾಣ್ ಮತ್ತು ಬೀದರ್ ನ ಸಂಜೀವ್ ಕುಮಾರ್ , ಕಲ್ಲಪ್ಪ ಎಂದು ಗುರುತಿಸಲಾಗಿದೆ. ಇವರು ತೆಲಂಗಾಣ ಹಾಗೂ ಬೀದರನಿಂ ಅಪಾರ ಪ್ರಮಾಣದಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ […]