ಕನ್ನಡ ಹಿರಿಯ ನಟ ಶನಿ ಮಹಾದೇವಪ್ಪ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹಾದೇವಪ್ಪ(90) ಇಂದು ನಿಧನರಾದರು. ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸಂಜೆ ನಾಲ್ಕು ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣದಂತಹ ಪ್ರಮುಖ ಚಿತ್ರಗಳು ಸೇರಿದಂತೆ ವರನಟ ಡಾ.ರಾಜ್ ಕುಮಾರ್​ ಅವರ ಜೊತೆಯಲ್ಲಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಶನಿ ಮಹಾದೇವಪ್ಪ ನಟಿಸಿದ್ದರು. ಒಟ್ಟಾರೆ ತಮ್ಮ ಸಿನಿಮಾ ಪಯಣದಲ್ಲಿ 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಏಳು ಮಂದಿ ದುರ್ಮರಣ; ಹಲವರಿಗೆ ಗಾಯ

ಮಂಗಳೂರು: ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ವೊಂದು ಚಾಲಕನ ನಿಯಂತ್ರಣತಪ್ಪಿ ರಸ್ತೆ ಬದಿಯ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಏಳು ಮಂದಿ ದುರ್ಮರಣ ಹೊಂದಿದ್ದು, ಹಲವು ಮಂದಿ ಗಾಯಗೊಂಡ ಘಟನೆ ಕರ್ನಾಟಕ-ಕೇರಳ ಗಡಿಭಾಗದ ಕಲ್ಲಪ್ಲಳ್ಳಿ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಆದರ್ಶ್(12), ಶ್ರೇಯಸ್(13), ರವಿಚಂದ್ರನ್(40), ರಾಜೇಶ್(45), ಸುಮತಿ(50), ಜಯಲಕ್ಷ್ಮಿ(39) ಮತ್ತು ಸಸೀಂದ್ರ ಪೂಜಾರ(43) ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಕೇರಳದ ಪಾಣತ್ತೂರು ಎಂಬಲ್ಲಿಗೆ ಮದುವೆಗೆ 63 ಮಂದಿ ಬಸ್ ನಲ್ಲಿ ತೆರಳುತ್ತಿದ್ದರು. ಆದರೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ […]

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಆರೋಗ್ಯದಲ್ಲಿ ಏರುಪೇರು ಆಗಿ ಕಾರಿನಲ್ಲಿಯೇ ಪ್ರಜ್ಞೆತಪ್ಪಿ ಕುಸಿದುಬಿದ್ದ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಪಿಟ್ಸ್ ಬಂದು ಮೂರ್ಛೆ ಹೋದ ರೀತಿಯಲ್ಲಿ ಕುಸಿದು ಬಿದ್ದರು ಎಂದು ಜೊತೆಗಿದ್ದ ಕಾರ್ಯಕರ್ತರು ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ನಂತರ ಚಿತ್ರದುರ್ಗದ ಬಿಜೆಪಿ ಮುಖಂಡ ನವೀನ್ ಮಾಲೀಕತ್ವದ ನವೀನ್ ರೆಸಿಡೆನ್ಸಿಗೆ ಭೇಟಿ ನೀಡಿದ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಪ್ರಜ್ಞೆ ತಪ್ಪಿದ ಘಟನೆ […]

ಭಾರತದಲ್ಲಿ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮತಿ

ನವದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆ (ಡಿಸಿಜಿಐ) ಒಪ್ಪಿಗೆ ನೀಡಿದೆ. ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ನೀಡಲಾಗಿದೆ. ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಡಿಸಿಜಿಐ ಅಧ್ಯಕ್ಷ ವಿ.ಜಿ. ಸೋಮಾನಿ ಮಾಹಿತಿ ನೀಡಿದರು. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ‘ಕೊವ್ಯಾಕ್ಸಿನ್ ಲಸಿಕೆ’ ಹಾಗೂ ಆಸ್ಟ್ರಾಜೆನಿಕಾ ಆಕ್ಸ್ ಫರ್ಡ್ ವಿವಿ ಅಭಿವೃದ್ಧಿಪಡಿಸಿರುವ ‘ಕೊವಿಶೀಲ್ಡ್ ಲಸಿಕೆ’ ಅನುಮತಿ ನೀಡಲಾಗಿದೆ. ಕೊವಿಶೀಲ್ಡ್ ಲಸಿಕೆ ಶೇ. 70.1ರಷ್ಟು ದಕ್ಷತೆ ಹೊಂದಿದೆ. ದೇಶದಲ್ಲಿ […]

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಮದುವೆ ಫೋಟೋಗಳು ಜಾಲತಾಣದಲ್ಲಿ ವೈರಲ್

ಬಳ್ಳಾರಿ: ಡಿಸೆಂಬರ್ 16 ರಂದು ಬಳ್ಳಾರಿ ಗುಗ್ಗರಹಟ್ಟಿ ಪ್ರದೇಶದ ಇಂಜಿನಿಯರಿಂಗ್ ಪದವೀಧರೆ ಶ್ವೇತಾ ಎಂಬಾಕೆ ಲಿವಿಂಗ್ ವಾಟರ್ ಚರ್ಚ್ ಫಾಸ್ಟರ್ ರವಿಕುಮಾರ್ ಜತೆ ಪರಾರಿಯಾಗಿದ್ದು, ಇದೀಗ ಈ ಜೋಡಿಯ ಮದುವೆಯ ಪೋಟೋಗಳು ವೈರಲ್ ಆಗಿವೆ. 54 ಹರೆಯದ ಚರ್ಚ್ ಫಾಸ್ಟರ್ ಜತೆ 24 ವರ್ಷದ ಶ್ವೇತಾ ಮದುವೆಯಾಗಿದ್ದಾಳೆ. ಈ ಇಬ್ಬರು ನಾಪತ್ತೆಯಾಗಿದ್ದ ಪ್ರಕರಣ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿತ್ತು. ಅಲ್ಲದೆ ಯುವತಿ ಪಾಲಕರು ಮಗಳು ಕಾಣಿಸುತ್ತಿಲ್ಲ ಎಂದು ಕಂಗಾಲಾಗಿ ಪೊಲೀಸ್​ ಠಾಣೆ ಮೆಟ್ಟಿಲನ್ನೂ ಏರಿದ್ದರು. ಇದೀಗ ಇವರಿಬ್ಬರು […]