ಆರೇ ವಾರದಲ್ಲಿ ಹೊಸ ಸ್ವರೂಪದ ಕೊರೊನಾ ಸೋಂಕಿಗೂ ಲಸಿಕೆ ಸಿದ್ಧ.!

ಲಂಡನ್: ವಿಶ್ವಾದ್ಯಂತ ಹೊಸ ಸ್ವರೂಪದ ಕೊರೊನಾ ವೈರಸ್ ಭಾರಿ ಚರ್ಚೆ ಹಾಗೂ ಭೀತಿ ಹುಟ್ಟಿಸಿದೆ. ಈ ಆತಂಕದ ನಡುವೆಯೇ ಇದೀಗ ಬಯೋ ಎನ್ ಟೆಕ್ ಸಂಸ್ಥೆಯಿಂದ ಹೊರಬಿದ್ದಿರುವ ವಿಷಯ ಜನರಲ್ಲಿ ಸ್ವಲ್ಪ ನಿರಾಳತೆಯನ್ನು ಮೂಡಿಸಿದೆ. ಹೌದು, ಬಯೋ ಎನ್ ಟೆಕ್ ಸಂಸ್ಥೆ ಹೊಸ ಮಾದರಿಯ ಕೊರೊನಾ ಸೋಂಕಿಗೂ ಆರೇ ವಾರದಲ್ಲಿ ಲಸಿಕೆ ಕಂಡು ಹಿಡಿಯುವುದಾಗಿ ಹೇಳಿದೆ. ಈ ಕುರಿತಂತೆ ಮಾತನಾಡಿದ ಬಯೋ ಎನ್ ಟೆಕ್ ಸಂಸ್ಥೆಯ ಸಹ ಸಂಸ್ಥಾಪಕ ಉಗರ್ ಸಹಿನ್ ಅವರು, ಕೊರೊನಾ ವೈರಸ್ ವಿರುದ್ಧದ […]

ನಂದಗೋಕುಲ ಕಾರ್ಯಾಗಾರ ಉದ್ಘಾಟನೆ; ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಪೂರಕ-ಸದಾಶಿವ ಶೆಟ್ಟಿ

ಉಡುಪಿ: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಪೂರಕ. ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಕಲೆಯನ್ನು ಹೊರತಂದು ಕಲಾವಿದನಾಗಿ ರೂಪಿಸುವಲ್ಲಿ ಶಿಬಿರಗಳು ಸಹಕಾರಿಯಾಗಲಿವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿ ಹೇಳಿದರು. ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾ ತಂಡದ ಕಲಾವಿದರಗಾಗಿ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಕೊಕ್ಕರ್ಣೆ ಸಮೀಪದ ಬಲ್ಲೆಬೈಲಿನಲ್ಲಿ ನಡೆದ ಮೂರುದಿನಗಳ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಉದ್ಯಾವರ, ತಂಡದ ವ್ಯವಸ್ಥಾಪಕ ಕಾರ್ತಿಕ್ ಬ್ರಹ್ಮಾವರ, ಬರಹಗಾರ್ತಿ ಲಿಖಿತಾ ಶೆಟ್ಟಿ, ವಿಶಾಲಾಕ್ಷಿ ರಾವ್, […]

ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಇದರ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ಮಣಿಪಾಲ ನರಸಿಂಗೆ ಶ್ರೀ ನರಸಿಂಹ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷ ಬಿ. ರಾಮಕೃಷ್ಣ ನಾಯಕ್ ಪರ್ಕಳ ಅಧ್ಯಕ್ಷತೆ ನಡೆಯಿತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೊಸೈಟಿ ₹ 263 ಕೋಟಿ ಅಧಿಕ ವಹಿವಾಟು ನಡೆಸಿದ್ದು, ₹63.07 ಕೋಟಿಗೂ‌ ಹೆಚ್ಚಿನ ಠೇವಣಿ ಸಂಗ್ರಹ ಮಾಡಿದೆ. ₹50.93 ಕೋಟಿ ಅಧಿಕ ಸಾಲ ವಿತರಣೆ ಮಾಡಿದ್ದು, ₹1.28 ಕೋಟಿ ಲಾಭಗಳಿಸಿದೆ. ಸದಸ್ಯರಿಗೆ ಶೇ. 12 ರಷ್ಟು […]

ಗ್ರಾಪಂ ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಬಳಿ ಗನ್ ಪತ್ತೆ

ಬೆಳಗಾವಿ: ಇಲ್ಲಿನ ದೇಸೂರ ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರ ಬಳಿ ಬುಲೆಟ್ ತುಂಬಿದ ಗನ್ ಪತ್ತೆಯಾಗಿದೆ. ಈ ಬಗ್ಗೆ ಚುನಾವಣಾ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸರು ಅಧಿಕಾರಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಆಗ ಇದು ಲೈಸನ್ಸ್ ಹೊಂದಿರುವ ಗನ್ ಆಗಿದ್ದು, ಅಧಿಕಾರಿ ಕರ್ತವ್ಯಕ್ಕೆ ಬರುವಾಗ ತೆಗೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಬಳಿಕ ಚುನಾವಣಾ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿ, ಆ ಅಧಿಕಾರಿಯನ್ನು ಕರ್ತವ್ಯದಿಂದ ತೆಗೆದು ಆ ಜಾಗಕ್ಕೆ ಬೇರೊಂದು […]

ಗ್ರಾಪಂ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಶೇ. 32.20 ಮತದಾನ

ಉಡುಪಿ: ಜಿಲ್ಲೆಯ ನಾಲ್ಕು ತಾಲ್ಲೂಕಿನ 67 ಗ್ರಾಮ ಪಂಚಾಯತ್ ಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲೆಯಲ್ಲಿ ಬೆಳಿಗ್ಗೆ 11ಗಂಟೆಗೆ ಒಟ್ಟು ಶೇ. 32.20 ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ 7ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಜನರು ಬೆಳಿಗ್ಗೆಯಿಂದಲೇ ಭಾರಿ‌ ಉತ್ಸಾಹದಿಂದ ಮತಗಟ್ಟೆ ಆಗಮಿಸಿ ತಮ್ಮ ಮತ ಚಲಾವಣೆ ಮಾಡುತ್ತಿದ್ದಾರೆ. ಉಡುಪಿ ತಾಲ್ಲೂಕಿನಲ್ಲಿ ಶೇ. 33, ಹೆಬ್ರಿ ತಾಲ್ಲೂಕಿಲ್ಲಿ ಶೇ. 34, ಬ್ರಹ್ಮಾವರ ತಾಲ್ಲೂಕಿನಲ್ಲಿ ಶೇ. 33 ಹಾಗೂ ಬೈಂದೂರಿನಲ್ಲಿ ಶೇ. […]