ದೇಶದ ಚಿಂತನೆಯ ಮೊದಲು ಸ್ಥಳೀಯ ಸಮಸ್ಯೆಗೆ ಗಮನ ಕೊಡಬೇಕು: ಮಾಧವ ಆಚಾರ್ಯ

ಉಡುಪಿ: ದೇಶದ ಬಗ್ಗೆ ಚಿಂತನೆ ಮಾಡುವ ಮೊದಲು ನಾವು ನಮ್ಮ ಸ್ಥಳೀಯ ಸೂಕ್ಷ್ಮ ಸಮಸ್ಯೆಗಳ ಕಡೆಗೆ ಗಮನಕೊಡಬೇಕು. ಅದಕ್ಕಾಗಿ ನಾವು ನ್ಯಾಯ ಸಮ್ಮತವಾದ ಹಾದಿಯಲ್ಲಿ ನಡೆಯಬೇಕು ಎಂದು ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಹೇಳಿದರು. ಅಲೆವೂರು ಗ್ರೂಪ್‌ ಫಾರ್‌ ಎಜುಕೇಶನ್‌ ಆಶ್ರಯದಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಲೆವೂರು ಗ್ರೂಪ್‌ ಅವಾರ್ಡ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ದೇಶದ ಉದ್ಯೋಗ ಸಮಸ್ಯೆ, ಬೆಲೆ ಸಮಸ್ಯೆ, ಜೀವನ ಸಾಮರಸ್ಯ, ರಕ್ಷಣೆ […]

ಶಿಕ್ಷಾ ಪ್ರಭಾ ಸಂಸ್ಥೆ: ನೀಟ್/ಸಿಇಟಿ/ಜೆಇಇ ಮೈನ್ ತರಗತಿ ಆರಂಭ: ವಿದ್ಯಾರ್ಥಿಗಳಿಗಿದು ದಾರಿದೀಪ

ಕುಂದಾಪುರ: ಉತ್ತಮ್ ಕ್ಲಿನಿಕ್ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಾ ಪ್ರಭಾ ಸಂಸ್ಥೆಯು ಸಿಎ/ಸಿಎಸ್/ಸಿಎಂಎ ತರಬೇತಿಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯೆಂದು ಹೆಗ್ಗಳಿಕೆ ಹೊತ್ತಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳ ಅಪೇಕ್ಷೆಯಂತೆ ಉತ್ತಮ ಗುಣಮಟ್ಟದ ನೀಟ್/ಸಿಇಟಿ/ಜೆಇಇ ಮೈನ್ ತರಗತಿ ಆರಂಭಿಸಿದೆ. ಗ್ರಾಮೀಣಪ್ರದೇಶದ ವಿದ್ಯಾರ್ಥಿಗಳಿಗೆ ದಾರಿದೀಪ: ನುರಿತ ಗುಣಮಟ್ಟದ ಶಿಕ್ಷಕರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೈಗೆಟಕುವ ಬೆಲೆಯಲ್ಲಿ ನೀಡಬೇಕು ಎನ್ನುವುದು ಸಂಸ್ಥೆಯ ಉದ್ದೇಶ. ಮೂಡಬಿದ್ರೆ ಆಳ್ವಾಸ್ ಪಿಯು […]

ಕುಂದಾಪುರ:ಶಿಕ್ಷಾ ಪ್ರಭಾ ಸಂಸ್ಥೆಯ ವಿಜ್ಞಾನ ವಿಭಾಗದ ಮಾಹಿತಿ ಪತ್ರ ಬಿಡುಗಡೆ

ಕುಂದಾಪುರ: ಶಿಕ್ಷಾ ಪ್ರಭಾ ಸಂಸ್ಥೆಯು ವಿಜ್ಞಾನ ವಿಭಾಗದ ಮಾಹಿತಿ ಪತ್ರವನ್ನು ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯವರು ಸೋಮವಾರ ಉಡುಪಿ ಪೇಜಾವರ ಮಠದಲ್ಲಿ ಅನಾವರಣಗೊಳಿಸಿದರು.