ಉಡುಪಿ: ಹಿಂದಿ ಪ್ರಚಾರ ಸಮಿತಿ ಆಶ್ರಯದಲ್ಲಿ ಹಿಂದಿ ದಿನಾಚರಣೆ
ಉಡುಪಿ: ದೇಶದ ಜನತೆಯನ್ನು ಒಗ್ಗೂಡಿಸುವ ಶಕ್ತಿ ಹಿಂದಿ ಭಾಷೆಗೆ ಇದೆ ಎಂದು ಉಡುಪಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕಿ ಪುರೋಬಿ ಎ. ಭಂಡಾರಿ ಹೇಳಿದರು. ಉಡುಪಿ ಹಿಂದಿ ಪ್ರಚಾರ ಸಮಿತಿ ಆಶ್ರಯದಲ್ಲಿ ನಗರದ ಟಿ.ಎ. ಪೈ ಹಿಂದಿ ಭವನದಲ್ಲಿ ಶನಿವಾರ ಆಯೋಜಿಸಿದ ಹಿಂದಿ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದಿ ವಿಶ್ವದ ನಾಲ್ಕನೇ ಭಾಷೆಯಾಗಿ ಗುರುತಿಸಿಕೊಂಡಿದೆ. ದೇಶದಲ್ಲಿ ಇಂಗ್ಲಿಷ್ ಮಾತನಾಡಲು ಬಾರದವರು ನಂತರ ಆಯ್ಕೆ ಮಾಡಿಕೊಳ್ಳುವುದೇ ಹಿಂದಿ ಭಾಷೆ. ಇದು ಹೃದಯದ ಭಾಷೆಯಾಗಿದ್ದು, […]
ಉಡುಪಿ: ಆಟೊ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ನಾರಾಯಣಗುರು ಜಯಂತಿ
ಉಡುಪಿ: ಶೋಷಿತ ವರ್ಗದ ಆತ್ಮಬಲದ ಪ್ರತೀಕವಾಗಿ ಹುಟ್ಟಿ ಬಂದ ನಾರಾಯಣಗುರು ಇಡೀ ಮನುಕುಲದ ಬೆಳಕು ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು. ಬನ್ನಂಜೆ ನಾರಾಯಣಗುರು ಆಟೊ ಚಾಲಕ ಮತ್ತು ಮಾಲೀಕರ ಸಂಘ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ ಶ್ರೀ ನಾರಾಯಣಗುರು ಅವರ 165ನೇ ಜನ್ಮದಿನಾಚರಣೆ ಕಾರ್ಯಕ್ರಮಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾನತೆ ಹಾಗೂ ಸಹೋದರತೆ ಬದುಕಿ ಆಧಾರವಾಗಬೇಕೆಂಬ ನಾರಾಯಣಗುರುಗಳ ಸಂದೇಶ ಎಲ್ಲ ಜಾತಿಗೂ ಪ್ರಸ್ತುತವಾಗಿದೆ. ಕೆಲ ಪಟ್ಟಭದ್ರ ಹಿತಾಶಕ್ತಿಗಳು ಶೋಷಿತರು, ಬಡವರ ಪರ ಹೋರಾಡಿದ ಎಲ್ಲಾ […]
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಮಾಹಿತಿ
ಕಾರ್ಕಳ; ಮತದಾನ ಎಲ್ಲರ ಹಕ್ಕು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತದಾನ ಅಗತ್ಯ ಭಾರತದಲ್ಲಿ ಯುವ ಶಕ್ತಿಯು ಹೇರಳವಾಗಿದೆ ಆದ್ದರಿಂದ ದೇಶದ ಸರ್ವತೋಮುಖ ಅಭಿವೃಧ್ಧಿ ಯುವ ಮತದಾರರ ಕೈಯಲ್ಲಿದೆ. ದೇಶದ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಬದಲಿಸುವ ಸಾಮರ್ಥ್ಯ ಯುವ ಜನತೆಯಲ್ಲಿದೆ ಆ ಸಾಮರ್ಥ್ಯವನ್ನು ದೇಶದ ಅಭಿವೃಧ್ಧಿಯಲ್ಲಿ ಬಳಸಿಕೊಳ್ಳಬೇಕು ಎಂದು ಉಡುಪಿಯ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುರೇಂದ್ರನಾಥ ಶೆಟ್ಟಿ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಮತದಾನ ಸಾಕ್ಷರತಾ […]
ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಲಲಿತಕಲಾ ಸಂಘದ ಚಟುವಟಿಕೆ ಉದ್ಘಾಟನೆ:
ಕಾರ್ಕಳ: ಜೀವನದಲ್ಲಿ ಏನ್ನಾದರೂ ಸಾಧನೆ ಮಾಡಲು ಪ್ರೇರಣೆ ಮುಖ್ಯವಾಗುತ್ತದೆ. ಪ್ರತಿಯೊಂದು ವಿಷಯಗಳಲ್ಲೂ ಪ್ರೇರಣೆಯನ್ನು ಕಾಣಬೇಕು ಆಗ ಮಾತ್ರ ಸಾಧಿಸುವ ಹುಮ್ಮಸ್ಸು ಬರುತ್ತದೆ ಎಂದು ನಟ, ಕಲಾವಿದ ಪೃಥ್ವಿ ಅಂಬರ್ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಲಲಿತಕಲಾ ಸಂಘದ ಪ್ರಸ್ತುತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಲೆ ಇದ್ದವನು ಎಲ್ಲಿ ಬೇಕಾದರೂ ಬದುಕಬಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುತ್ತದೆ ಆದರೆ ಅದನ್ನು ಹೊರ ತರುವ ರೀತಿ ತಿಳಿದಿರಬೇಕು. ಲಲಿತಕಲಾ ಸಂಘಗಳು ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಹೊರತರುವಲ್ಲಿ ಮುಖ್ಯ […]
ಮಲೆಯಾಳಿ ಜನರು ನನ್ನನ್ನು ಕನ್ನಡದ ಹುಡುಗನಾಗಿಯೇ ನೋಡುತ್ತಾರೆ: ಕುಂದಾಪುರದಲ್ಲಿ ಬೆಂಗಳೂರ ಕೊಂಡಾಡಿದ ಕ್ರಿಕೆಟಿಗ ಶ್ರೀಶಾಂತ್
ಕುಂದಾಪುರ: ನನ್ನ ಕ್ರಿಕೆಟ್ ಜೀವನ ಮತ್ತೆ ಹಿಂದಿರುಗುತ್ತಿದ್ದು, ಬಿಬಿಸಿಐಗೆ ಧನ್ಯವಾದ ಹೇಳುತ್ತಿದ್ದೇನೆ. ಹಿಂದೆ ನನ್ನ ವಿರುದ್ದವಾಗಿ ಮಾತುಗಳು ಬಂದಾಗ ಬಿಸಿಸಿಐ ನನ್ನ ಪರ ನಿಲ್ಲಲಿಲ್ಲ. ಹೀಗಾಗಿ ನಾನು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಕಳೆದ ಆರು ವರ್ಷಗಳಿಂದ ದೇವರು ನನ್ನ ಪರವಾಗಿ ಇರಲಿಲ್ಲ. ಆದರೆ ಇದೀಗ ನನಗೆ ಮತ್ತೆ ಕ್ರಿಕೆಟ್ ಆಡಲು ಅವಕಾಶ ದೊರೆತಿದೆ. ದೇವರ ಕೃಪೆ ನನ್ನ ಮೇಲಿದೆ ಎಂದು ಕ್ರಿಕೆಟಿಗ ಶ್ರೀಶಾಂತ್ ಹೇಳಿದರು. ಅವರು ಶುಕ್ರವಾರ ಸಂಜೆ ಬೈಂದೂರಿನ ರುಪೀ ಮಾಲ್ ಉದ್ಘಾಟನೆಗೆ ಬಂದ ವೇಳೆಯಲ್ಲಿ […]